LatestMain PostNational

ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

ನವದೆಹಲಿ: ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಶುಭ ಹಾರೈಸಿದ್ದಾರೆ.

ಟ್ವಿಟ್ಟರ್ ಅನ್ನು ಕೊಂಡುಕೊಂಡ ಬಳಿಕ ಟೆಸ್ಲಾ ಮುಖ್ಯಸ್ಥನಿಗೆ ಭಾರತದಿಂದ ಮೊದಲ ಪ್ರತಿಕ್ರಿಯೆ ನೀಡಿದ ರಾಜೀವ್ ಚಂದ್ರಶೇಖರ್, ಟ್ವಿಟ್ಟರ್ ಬಗೆಗಿನ ಭಾರತದ ಉದ್ದೇಶಗಳು, ಹೊಣೆಗಾರಿಕೆ, ಸುರಕ್ಷತೆ, ನಂಬಿಕೆ ಬದಲಾಗಿಲ್ಲ ಎಂದು ಹೇಳಿದರು. ನಾನು ಎಲಾನ್ ಮಸ್ಕ್‌ಗೆ ಶುಭ ಹಾರೈಸುತ್ತೇನೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಧ್ಯವರ್ತಿಗಳ ಹೊಣೆಗಾರಿಕೆ, ಸುರಕ್ಷತೆ, ನಂಬಿಕೆಯ ಗುರಿಗಳು ಹಾಗೂ ನಿರೀಕ್ಷೆಗಳು ಬದಲಾಗದೆ ಉಳಿದಿವೆ ಎಂದು ಮಾಧ್ಯಮಗಳ ಮೂಲಕ ಮಸ್ಕ್‌ಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

ವಿಶ್ವದಲ್ಲೇ ಅತಿ ಹೆಚ್ಚು ಟ್ವಿಟ್ಟರ್ ಚಂದಾದಾರರನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಕಳೆದ ದಶಕದಲ್ಲಿ, ಮೈಕ್ರೋಬ್ಲಾಗಿಂಗ್ ಸೈಟ್‌ಗೆ ದೇಶದಲ್ಲಿ ತನ್ನ ಚಂದಾದಾರರ ನೆಲೆಯಲ್ಲಿ ತ್ವರಿತ ಏರಿಕೆ ಕಂಡಿದೆ. ತ್ವರಿತ ಬೆಳವಣಿಗೆಯಲ್ಲೂ ಸರ್ಕಾರ ಹಾಗೂ ಪ್ರತಿ ಪಕ್ಷಗಳನ್ನು ಮುಖಾಮುಖಿಯಾಗಿ ತೆರೆದುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

ಈ ಹಿಂದೆ ಭಾರತ ಟ್ವಿಟ್ಟರ್‌ಗೆ ಪರ್ಯಾಯ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತ್ತು. ಕೂ ಹೆಸರಿನ ಅಪ್ಲಿಕೇಶನ್ ಭಾರತದ ಹಲವು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಬಳಕೆದಾರರಿಗೆ ಅತ್ಯಂತ ಅನುಕೂಲಕರವಾಗಿದೆ.

Leave a Reply

Your email address will not be published.

Back to top button