ಜಕಾರ್ತ: ತೈಲ ದಾಸ್ತಾನು ಕೇಂದ್ರದಲ್ಲಿ (Fuel Depot) ಸಂಭವಿಸಿದ ಬೆಂಕಿ (Fire) ಅವಘಡದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟ ಘಟನೆ ಇಂಡೋನೇಷ್ಯಾ (Indonesia) ರಾಜಧಾನಿ ಜಕಾರ್ತದಲ್ಲಿ ನಡೆದಿದೆ.
ತನ್ಹಾ ಮೆರಹ್ ಪ್ರದೇಶದ ಪ್ಲುಮ್ಪಾಂಗ್ ತೈಲ ಸಂಗ್ರಹ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸುಟ್ಟ ಮನೆಗಳು ಹಾಗೂ ಕಟ್ಟಡಗಳ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
Advertisement
Advertisement
ದೇಶದ ಶೇ. 25ರಷ್ಟು ಇಂಧನ ಅಗತ್ಯವನ್ನು ಇದೇ ಕೇಂದ್ರ ಪೂರೈಸುತ್ತಿತ್ತು. ಘಟನೆ ವೇಳೆ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಕನಿಷ್ಠ 260 ಅಗ್ನಿಶಾಮಕ ಸಿಬ್ಬಂದಿ ಹಾಗೂ 52 ಅಗ್ನಿಶಾಮಕ ಇಂಜಿನ್ಗಳಿದ್ದವು. ಇದನ್ನೂ ಓದಿ: ಅಶೋಕ್ ಜೊತೆ ಇರುವವರೆಲ್ಲ ಕುಂಟ್ಕೊಂಡೆ ಓಡಾಡುತ್ತಾರೆ: ಡಿ.ಕೆ.ಸುರೇಶ್
Advertisement
Advertisement
ಪಶ್ಚಿಮ ಜಾವಾ ಪ್ರಾಂತ್ಯದ ಪೆರ್ಟಮಿನಾದ ಬಲೋಂಗನ್ ರಿಫೈನರಿಯಿಂದ ಡಿಪೋ ಇಂಧನವನ್ನು ಪಡೆದಿದ್ದರು. ಇದರಿಂದಾಗಿ ಹೆಚ್ಚಿನ ಒತ್ತಡವಾಗಿ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಲಮಿಶ್ರಿತ ನೀರು ಸೇವಿಸಿ ಮೂವರ ಸಾವು; 21 ದಿನ ಕಳೆದ್ರೂ ತಪ್ಪಿತಸ್ಥರ ಮೇಲೆ ಇಲ್ಲ ಕ್ರಮ