ಜಕಾರ್ತ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಭಾರೀ ಹಾನಿಯನ್ನುಂಟು ಮಾಡಿದೆ.
ಭೂಕುಸಿತ ಮತ್ತು ಪ್ರವಾಹಕ್ಕೆ (Floods And Landslide in Indonesia) ಸಿಲುಕಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳದಲ್ಲಿ ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಆರಂಭಿಸಿವೆ ಎಂದು ಭಾನುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Advertisement
ಟನ್‌ಗಟ್ಟಲೆ ಮಣ್ಣು, ಬಂಡೆಗಳು ಮತ್ತು ಬೇರುಸಹಿತ ಮರಗಳು ಪರ್ವತದಿಂದ ಉರುಳಿ ಶುಕ್ರವಾರ ತಡರಾತ್ರಿ ನದಿಯನ್ನು ತಲುಪಿವೆ. ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಪೆಸಿಸಿರ್ ಸೆಲಾಟಾನ್ ಜಿಲ್ಲೆಯಲ್ಲಿ ಕಂಡುಕೇಳರಿಯದ ಪ್ರವಾಹ ಸೃಷ್ಟಿಯಾಗಿದೆ. ಈ ದುರಂತದಲ್ಲಿ ಸತ್ತವರ ಸಂಖ್ಯೆ 19 ಕ್ಕೆ ತಲುಪಿದೆ ಎಂಬುದಾಗಿ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಡೋನಿ ಯುಸ್ರಿಜಾಲ್ ಹೇಳಿದ್ದಾರೆ. ಇದನ್ನೂ ಓದಿ: ಗೇಟ್ ಮುಚ್ಚದ ನೆರೆಮನೆ ವ್ಯಕ್ತಿಯ ಕಿವಿ ಕಚ್ಚಿ ನುಂಗಿದ ಮಹಿಳೆ!
Advertisement
Advertisement
80 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ: ಹಠಾತ್ ಪ್ರವಾಹದಲ್ಲಿ ಕನಿಷ್ಠ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದಾರೆ. ನಾಪತ್ತೆಯಾಗಿರುವ 7 ಜನರಿಗಾಗಿ ರಕ್ಷಣಾ ತಂಡ ಹುಡುಕಾಟ ನಡೆಸುತ್ತಿದೆ. ಪ್ರವಾಹಗಳು ಮತ್ತು ಭೂಕುಸಿತಗಳಿಂದಾಗಿ ಸುಮಾರು 14 ಮನೆಗಳು ಧ್ವಂಸಗೊಂಡಿವೆ. 80,000 ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕ ಸರ್ಕಾರಿ ಆಶ್ರಯಕ್ಕೆ ಕಳುಹಿಸಲಾಗಿದೆ. ಆದರೆ ಪಶ್ಚಿಮ ಸುಮಾತ್ರಾ ಪ್ರಾಂತ್ಯದ 9 ಜಿಲ್ಲೆಗಳು ಮತ್ತು ನಗರಗಳಲ್ಲಿ ಸುಮಾರು 20,000 ಮನೆಗಳು ಜಲಾವೃತವಾಗಿವೆ ಎಂಬುದಾಗಿ ವರದಿಯಾಗಿದೆ.