ನವದೆಹಲಿ: 8ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರದ ಲಡಾಖ್‍ನಿಂದ ಸಿಕ್ಕಿಂವರೆಗೆ ಇರುವ ವಿವಿಧ ಎತ್ತರದ ಹಿಮಾಲಯ ಪರ್ವತದಲ್ಲಿ ಯೋಗಾಭ್ಯಾಸವನ್ನು ಮಾಡಿದರು.
ಐಟಿಬಿಪಿ ಯೋಧರು ಹಲವಾರು ವರ್ಷಗಳಿಂದ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತ-ಚೀನಾ ಗಡಿಗಳ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ.
Advertisement
ಈ ಬಾರಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಅಂತಾರಾಷ್ಟ್ರೀಯ ಯೋಗ ದಿನದಂದು ಹಾಡನ್ನು ಅರ್ಪಿಸಿದ್ದಾರೆ ಜೊತೆಗೆ ITBP ಯೋಧರು ಲಡಾಖ್‌ನಲ್ಲಿ 17,000 ಅಡಿ ಎತ್ತರದಲ್ಲಿ ಯೋಗವನ್ನು ಪ್ರದರ್ಶಿಸಿದ್ದಾರೆ.
Advertisement
Advertisement
ಆಯುಷ್ ಸಚಿವಾಲಯವು ಈ ಬಾರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿರುವುದರಿಂದ ಈ ವಿಷಯವನ್ನು ಇಟ್ಟುಕೊಂಡು 75 ವರ್ಷಗಳ ಪ್ರಮುಖ ವಿಷಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಆಚರಿಸುತ್ತಿದೆ. ಇದರಿಂದಾಗಿ ಕೇಂದ್ರ ಮಂತ್ರಿಗಳಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ಪ್ರಮುಖ 75 ಸ್ಥಳಗಳನ್ನು ಗುರುತಿಸಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ದಸರಾ ಮೈದಾನದಲ್ಲಿ ಯೋಗವನ್ನು ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಟೇಡಿಯಂನಲ್ಲಿ ಸಾರ್ವಜನಿಕರೊಂದಿಗೆ ಕೇಜ್ರಿವಾಲ್ ಯೋಗ
Advertisement
ಪ್ರಪಂಚದಾದ್ಯಂತ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೇ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಯೋಗ ಗುರು ರಾಮದೇವ್ ಯೋಗ ಪ್ರದರ್ಶನ ನೀಡಿದ್ದರು. ಅನೇಕ ಮಕ್ಕಳು ಮತ್ತು ಇತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು