Connect with us

ಸಚಿವ ಜಾರ್ಜ್ ರ 700 ಕೋಟಿ ರೂ. ಮಹಾ ಹಗರಣ ಬಯಲು- 60 ವರ್ಷದವರೆಗೆ ಎಂಬೆಸ್ಸಿ ಗ್ರೂಪ್ ಪಾಲಾಗಲಿರೋ ಇಂದಿರಾನಗರ ಕಾಂಪ್ಲೆಕ್ಸ್

ಸಚಿವ ಜಾರ್ಜ್ ರ 700 ಕೋಟಿ ರೂ. ಮಹಾ ಹಗರಣ ಬಯಲು- 60 ವರ್ಷದವರೆಗೆ ಎಂಬೆಸ್ಸಿ ಗ್ರೂಪ್ ಪಾಲಾಗಲಿರೋ ಇಂದಿರಾನಗರ ಕಾಂಪ್ಲೆಕ್ಸ್

ಬೆಂಗಳೂರು: ಇಡೀ ಬೆಂಗಳೂರನ್ನೇ ಗುತ್ತಿಗೆ ಪಡೆಯಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹೊರಟಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಬೆಂಗಳೂರಿನ ಕಾಸ್ಟ್ಲಿ ಪ್ರಾಪರ್ಟಿ ಜಾರ್ಜ್ ಒಡೆತನದ ಎಂಬೆಸ್ಸಿ ಕೈಗೆ ಸಿಕ್ತಿದೆ. ಎಂಬೆಸ್ಸಿ ಸುಪರ್ದಿಗೆ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಮರು ನಿರ್ಮಾಣ ಗುತ್ತಿಗೆ ನೀಡಲಾಗ್ತಿದೆ.

ಮೊನ್ನೆ ತಾನೆ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ಪಾಡ್ ಟ್ಯಾಕ್ಸಿಯ ಗುತ್ತಿಗೆಯನ್ನು ಪಾಲುದಾರಿಕೆಯಲ್ಲಿ ಪಡೆದ ಸಚಿವ ಕೆ.ಜೆ ಜಾರ್ಜ್, ಅದನ್ನು ಮಾನ್ಯತಾ ಟೆಕ್ ಪಾರ್ಕ್‍ವರೆಗು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ರು. ಈಗ ಬಿಡಿಎಗೆ ಕಾಲಿಟ್ಟಿರೋ ಕೆ.ಜೆ. ಜಾರ್ಜ್ ಅಂಡ್ ಕಂಪನಿ ಬಿಡಿಎನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ ಗಳ ಮರು ಅಭಿವೃದ್ದಿಯ ಯೋಜನೆಯಡಿಯಲ್ಲಿ ತಮ್ಮ ಪಾಲುದಾರಿಕೆಯ ಕಂಪನಿ ಎಂಬೆಸ್ಸಿ ಗ್ರೂಪ್‍ಗೆ ಗುತ್ತಿಗೆ ಕೊಡಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.

ಈಗಾಗಲೇ ಇಂದಿರಾ ನಗರದ ಶಾಂಪಿಂಗ್ ಕಾಂಪ್ಲೆಕ್ಸ್ ಗುತ್ತಿಗೆಯನ್ನು ಪಡೆಯೋ ಅಂತಿಮ ಹಂತದಲ್ಲಿರೋ ಎಂಬೆಸ್ಸಿ ಗ್ರೂಪ್ ಇನ್ನುಳಿದ ಆಸ್ಟೀನ್ ಟೌನ್, ಕೋರಮಂಗಲ, ಆರ್.ಟಿ. ನಗರ, ಸದಾಶಿವನಗರ ಕಾಂಪ್ಲೆಕ್ಸ್ ಸೇರಿದಂತೆ 6 ಕಾಂಪ್ಲೆಕ್ಸ್ ಗಳಿಗೂ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಎಲ್ಲಾ ಕಂಪ್ಲೆಕ್ಸ್ ಗಳ ಗುತ್ತಿಗೆಯನ್ನು ಎಂಬೆಸ್ಸಿ ಗ್ರೂಪ್ ಪಡೆದರೆ ಬಿಡಿಎನ ಪ್ರಮುಖ ಆಸ್ತಿ ಕೆ.ಜೆ. ಜಾರ್ಜ್ ಪಾಲಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ. 657 ಕೋಟಿ ರೂಪಾಯಿಯ ಬೃಹತ್ ಯೋಜನೆ ಇದಾಗಿದ್ದು, 60 ವರ್ಷದವರೆಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗ್ತಾಯಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

Advertisement
Advertisement