ಕೊಪ್ಪಳ: ಬಿಜೆಪಿ (BJP) ಸರ್ಕಾರ 40 ಪರ್ಸೆಂಟ್ ಕಮಿಷನ್ (40 Percent Commission) ಪಡೆಯುವುದನ್ನ ಕಡಿಮೆ ಮಾಡಿದ್ರೆ, ಬಡವರಿಗೆ ಖರ್ಚು ಮಾಡಲು ಹಣ ಉಳಿಯುತ್ತಿತ್ತು. ಇಂದಿರಾ ಕ್ಯಾಂಟೀನ್ (Indira Canteen) ಸಹ ಉಳಿಯುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದರು.
ಕೊಪ್ಪಳದ (Koppal) ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಡವರ ಹಾಗೂ ಕಾರ್ಮಿಕರ ಸಲುವಾಗಿ ನಮ್ಮ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನ ಭ್ರಷ್ಟ ಬಿಜೆಪಿ ಸರ್ಕಾರ ಮುಚ್ಚಿದೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಮುನ್ನಡೆಸಲು ಹಣದ ಕೊರತೆ ಇದೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು. ಶೇ.40ರಷ್ಟು ಕಮಿಷನ್ ಪಡೆಯೋದನ್ನ ಕಡಿಮೆ ಮಾಡಿದ್ರೆ ಬಡವರಿಗೆ ಖರ್ಚು ಮಾಡಲು ಹಣ ಉಳಿಯುತ್ತಿತ್ತು ಎಂದು ಚಾಟಿ ಬೀಸಿದರು. ಇದನ್ನೂ ಓದಿ: IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?
ಇದೇ ವೇಳೆ ಪಿಎಸ್ಐ ನೇಮಕಾತಿ ಮಾಡಿಸಿ ಕೊಡುವುದಾಗಿ ಹೇಳಿ ಹಣ ಲೂಟಿ ಹೊಡೆದ ಗಿರಾಕಿ ಶಾಸಕನಿಗೆ ವೋಟು ಹಾಕ್ತೀರಾ ಎಂದು ಪ್ರಶ್ನಿಸಿ, ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಹೆಸರು ಉಲ್ಲೇಖಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?
ಪಿಎಸ್ಐ ಹಗರಣದಲ್ಲಿ 15 ಲಕ್ಷ ರೂ. ಪಡೆದ ಆರೋಪ ಆ ಶಾಸಕನ ಮೇಲಿದೆ. ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡರೂ ಬಿಜೆಪಿ ಸರ್ಕಾರ ಮನೆಗೆ ಕಳುಹಿಸದೇ ಆ ಶಾಸಕನನ್ನ ರಕ್ಷಣೆ ಮಾಡಿದೆ. ಮತದಾನದ ದಿನದಂದು ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಗೆ ಮತ ಹಾಕಿ ಬಿಜೆಪಿ ಶಾಸಕನನ್ನ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.