– ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ
ಚಿಕ್ಕಬಳ್ಳಾಪುರ: ಇಂಡಿಗೋ ಏರ್‌ಲೈನ್ಸ್‌ನ (IndiGo Airlines) ಸಿಸ್ಟಂನಲ್ಲಿನ ತಾಂತ್ರಿಕ ದೋಷದಿಂದಾಗಿ ಶನಿವಾರ ದೇಶಾದ್ಯಂತ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಸರ್ವರ್ ಸಮಸ್ಯೆಯಿಂದಾಗಿ ಚೆಕ್-ಇನ್ ಮತ್ತು ಚೆಕ್-ಔಟ್ ಆಗಲು ಪ್ರಯಾಣಿಕರು ಪರದಾಡಿದರು.
Advertisement
ಸರ್ವರ್ ಸಮಸ್ಯೆ ಕಾರಣಕ್ಕೆ ಕೆಂಪೇಗೌಡ ಏರ್ಪೋರ್ಟ್‌ನ (Kempegowda Airport) ಟರ್ಮಿನಲ್ 1 ರಲ್ಲಿ ಪ್ರಯಾಣಿಕರು ಪರದಾಡಿದರು. ನೂರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಿದರು. ಇದನ್ನೂ ಓದಿ: ಸಿಎಂ ಏನ್ ದೆವ್ವನಾ ನಾನು ಹೆದರೋಕೆ – ಸಿದ್ದರಾಮಯ್ಯಗೆ ಹೆಚ್‌ಡಿಕೆ ತಿರುಗೇಟು
Advertisement
Advertisement
ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರಿದಿದೆ. ಚೆಕ್-ಇನ್ ಸಮಸ್ಯೆ ಹಿನ್ನೆಲೆ ವಿಮಾನಗಳ ಟೇಕ್ ಆಫ್‌ನಲ್ಲೂ ವಿಳಂಬವಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೇ ಪ್ರಯಾಣಿಕರು ಪರದಾಡಿದರು.
Advertisement
ಇಂಡಿಗೋದ ಟಿಕೆಟ್ ಬುಕಿಂಗ್ ಸರ್ವರ್ ಮಧ್ಯಾಹ್ನದಿಂದ ಪರಿಣಾಮ ಬೀರಿದೆ. ಮಧ್ಯಾಹ್ನ 1:05ಕ್ಕೆ ಕಾರ್ಯಾಚರಣೆಗಳು ಸಂಕ್ಷಿಪ್ತವಾಗಿ ಪುನರಾರಂಭಗೊಂಡಿವೆ. ಆದಾಗ್ಯೂ, ಸಿಸ್ಟಮ್‌ನಲ್ಲಿ ತೊಡಕಾಗುತ್ತಿದೆ. ಇದನ್ನೂ ಓದಿ: ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ
ಸಮಸ್ಯೆ ಪರಿಹರಿಸಲು, ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಏರ್ಲೈನ್ಸ್ ಹೇಳಿದೆ.
ವಿಮಾನ ನಿಲ್ದಾಣಗಳ ಚೆಕ್-ಇನ್‌ನಲ್ಲಿ ಪ್ರಯಾಣಿಕರು ಸರತಿ ಸಾಲುಗಳಲ್ಲಿ ನಿಂತಿರುವ ದೃಶ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಟಿಕೆಟ್ ಕಾಯ್ದಿರಿಸಲು ಅಥವಾ ಇತರ ಸೇವೆಗಳು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.