ನವದೆಹಲಿ: ದೇಶದ ದೊಡ್ಡ ವಿಮಾನಯಾನ ಸಂಸ್ಥೆಯಲ್ಲಿ ಒಂದಾದ ಇಂಡಿಗೋದ ನೂರಾರು ಸಿಬ್ಬಂದಿಗಳ ರಜೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಡಿಜಿಸಿಎ ಸೂಚಿಸಿದೆ.
ಅಹಮದಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ಇಂಟರ್‌ನ್ಯಾಶನಲ್ (ಎಸ್‍ವಿಪಿಐ) ವಿಮಾನ ನಿಲ್ದಾಣದಿಂದ 8 ಇಂಡಿಗೋ ವಿಮಾನಗಳು ಭಾನುವಾರ ತಡವಾಗಿತ್ತು. ಈ ಬಗ್ಗೆ ಸಾಕಷ್ಟು ಸಂಖ್ಯೆಯ ಸಿಬ್ಬಂದಿಯ ಕೊರತೆಯಿಂದಾಗಿ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಅಷ್ಟೇ ಅಲ್ಲದೇ ಕೋಲ್ಕತ್ತಾ, ನಾಗ್ಪುರ, ಚಂಡೀಗಢ, ದೆಹಲಿ ಮತ್ತು ಮುಂಬೈಗೆ ಇಂಡಿಗೋ 5 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.
Advertisement
Advertisement
ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಸಂಭವಿಸಿದ ವಿಮಾನ ವಿಳಂಬಕ್ಕೆ ಸ್ಪಷ್ಟೀಕರಣವನ್ನು ಕೋರಲಾಗಿದೆ. ಹೆಚ್ಚಿನ ಇಂಡಿಗೋ ಉದ್ಯೋಗಿಗಳು ಸಾಮೂಹಿಕ ಅನಾರೋಗ್ಯ ರಜೆಯಲ್ಲಿದ್ದರು ಎಂದು ತಿಳಿದು ಬಂದಿದೆ ಎಂದು ತಿಳಿಸಿದೆ.
Advertisement
Advertisement
ಇದರ ಪರಿಣಾಮವಾಗಿ ವಿಮಾನಯಾನವು ಕ್ಯಾಬಿನ್ ಸಿಬ್ಬಂದಿ ಸದಸ್ಯರ ಭಾರೀ ಕೊರತೆಯನ್ನು ಎದುರಿಸಿತು. ಹೀಗಾಗಿ ವಿಮಾನ ಚಲನೆಗೆ ಅಡ್ಡಿಯಾಯಿತು. ಈ ಹಿನ್ನೆಲೆಯಲ್ಲಿ ಇಂಡಿಗೋಗೆ ವಿಳಂಬದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಆದರೆ ಈ ಬಗ್ಗೆ ಇಂಡಿಗೋ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಹಾ ಬಿಕ್ಕಟ್ಟಿಗೆ ಇಂದು ಕ್ಲೈಮ್ಯಾಕ್ಸ್ – ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ
ಇಂಡಿಗೋದ ಶೇ.55ರಷ್ಟು ವಿಮಾನಗಳು ಜು. 2ರಂದು ವಿಳಂಬ ಸಂಚಾರ ಕೈಗೊಂಡಿತ್ತು. ಇದಕ್ಕೆ ಸಂಸ್ಥೆಯ ನೂರಾರು ಸಿಬ್ಬಂದಿ ದಿಢೀರನೆ ಅನಾರೋಗ್ಯ ಕಾರಣ ಹೇಳಿ ರಜೆ ತೆಗೆದುಕೊಂಡಿದ್ದರು. ಆದರೆ ಶನಿವಾರ ಮತ್ತು ಭಾನುವಾರ ಏರ್ ಇಂಡಿಯಾ ಹೊಸ ನೇಮಕಾತಿಗೆ ಪರೀಕ್ಷೆ ನಡೆದಿತ್ತು. ಅದರಲ್ಲಿ ಭಾಗಿಯಾಗುವ ಸಲುವಾಗಿ ಇಂಡಿಗೋ ಸಿಬ್ಬಂದಿಗಳೆಲ್ಲಾ ಅನಾರೋಗ್ಯದ ರಜೆ ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದ್ವೀಪರಾಷ್ಟ್ರದಲ್ಲಿ ಇಂಧನ ಬಿಕ್ಕಟ್ಟು- ಶಾಲೆಗಳಿಗೆ ರಜೆ ಘೋಷಣೆ