ಶಿವಮೊಗ್ಗ: ಹವಾಮಾನ ವೈಪರಿತ್ಯದಿಂದ ವಿಮಾನ ಲ್ಯಾಂಡ್ ಆಗದ ಕಾರಣ ಜಿಲ್ಲೆಯ ಪ್ರವಾಸದಲ್ಲಿದ್ದ ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಅವರು ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ ಇಂಡಿಗೋ ವಿಮಾನ (IndiGo Flight) ಮೋಡ ಕವಿದ ವಾತಾವರಣದಿಂದ ರನ್ ವೇ ವಿಸಿಬಲಿಟಿ ಇರದೇ ಶಿವಮೊಗ್ಗ (Shivamogga) ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೆ ಹಿಂತಿರುಗಿದೆ. ಇದೇ ವಿಮಾನದಲ್ಲಿ ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿಗೆ ವಾಪಸ್ ಮರಳುವಂತಾಗಿದೆ. ಇದರಿಂದ ಸಚಿವರ ಜಿಲ್ಲಾ ಪ್ರವಾಸ ರದ್ದಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪ್ರವಾಹ – ಅಯೋಧ್ಯೆಯ ಪ್ರಮುಖ ಪ್ರದೇಶಗಳಿಗೆ ನುಗ್ಗಿದ ನೀರು
- Advertisement
ಸೊರಬ ಮತ್ತು ತೀರ್ಥಹಳ್ಳಿಯಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಲು ಅವರು ತೆರಳಿದ್ದರು. ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಸೊರಬ ಹಾಗೂ ತೀರ್ಥಹಳ್ಳಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ವಿಮಾನ ಲ್ಯಾಂಡ್ ಆಗದ ಕಾರಣ ಗೃಹ ಸಚಿವರ ಪ್ರವಾಸ ರದ್ದಾಗಿದೆ. ಇದನ್ನೂ ಓದಿ: Assembly Bypolls: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು – ಇಂಡಿಯಾ ಒಕ್ಕೂಟಕ್ಕೆ ಭರ್ಜರಿ ಮುನ್ನಡೆ!