ನವದೆಹಲಿ: ಭಾರತವು ಪಾಕಿಸ್ತಾನದ(Pakistan) ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಾಯುನೆಲೆಯನ್ನು ನಿರ್ಬಂಧಿಸಲಾಗಿದ್ದು, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ(Indigo) 165ಕ್ಕೂ ಹೆಚ್ಚು ವಿಮಾನಯಾನವನ್ನು ಸ್ಥಗಿತಗೊಳಿಸಿದೆ.
ಜಮ್ಮು, ಶ್ರೀನಗರ, ಅಮೃತಸರ, ಲೇಹ್, ಚಂಡೀಗಢ, ಜೋಧ್‌ಪುರ, ಧರ್ಮಶಾಲಾ, ಬಿಕಾನೇರ್, ಗ್ವಾಲಿಯರ್, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 10ರವರೆಗೆ ಇಂಡಿಗೋ ರದ್ದುಗೊಳಿಸಿದೆ. ಇದನ್ನೂ ಓದಿ: ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್ ಸಿಂಹ ಲೇವಡಿ
ಪರಿಸ್ಥಿತಿ ಸೂಕ್ಷ್ಮತೆಯನ್ನು ಗಮನಿಸಿ ಇತರ ನಿಲ್ದಾಣಗಳಿಗೆ ವಿಮಾನ ಹಾರಾಟವನ್ನು ಹೊಂದಾಣಿಕೆ ಮಾಡಲಾಗುವುದು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಇಂಡಿಗೋ ಸಲಹೆ ನೀಡಿದೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ
ಅಲ್ಲದೇ ಏರ್ ಇಂಡಿಯಾ(Air India) ಸಂಸ್ಥೆ ಕೂಡ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್ ನಿಲ್ದಾಣಗಳಿಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟಗಳನ್ನು ಮೇ 10ರ ವರೆಗೆ ಬಂದ್ ಮಾಡಿದೆ ಎಂದು ಎಕ್ಸ್ ಮೂಲಕ ತಿಳಿಸಿದೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಸಾಕ್ಷಿ ಎಲ್ಲಿದೆ ಅಂದವರ ಬಾಯಿಯನ್ನೇ ಬಂದ್ ಮಾಡಿದ ಸೇನೆ!
`ಆಪರೇಷನ್ ಸಿಂಧೂರ'(Operation Sindoor) ಅಡಿಯಲ್ಲಿ ಭಾರತವು ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ನಂತರ ಭಾರತದ ಗಡಿಭಾಗಗಳಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: I TOLD MODI – ಆಪರೇಷನ್ ಸಿಂಧೂರ ಬೆನ್ನಲ್ಲೇ ಕಾರ್ಟೂನ್ ವೈರಲ್ !
18 ಏರ್‌ಪೋರ್ಟ್‌ಗಳ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಇನ್ನೂ ʻಆಪರೇಷನ್ ಸಿಂಧೂರʼ ಬೆನ್ನಲ್ಲೇ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಗೆ ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ. ಒಟ್ಟು 18 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನ ರದ್ದುಗೊಳಿಸಲಾಗಿದೆ, ಈ ಪೈಕಿ ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ನಿಲ್ದಾಣಗಳೂ ಸೇರಿವೆ. ಒಟ್ಟಾರೆಯಾಗಿ ವಿವಿಧ ವಿಮಾನಯಾನ ಸಂಸ್ಥೆಗಳ 200ಕ್ಕೂ ಹೆಚ್ಚು ವಿಮಾನ ಹಾರಾಟವನ್ನ ರದ್ದುಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.