ನವದೆಹಲಿ: ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಾಧವನ್, ಮಲೇಷ್ಯಾದೊಂದಿಗಿನ ಒಪ್ಪಂದದ ಬಗ್ಗೆ ನನಗೆ ವಿಶ್ವಾಸವಿದೆ. ಇದರ ಬಗೆಗಿನ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ. ರಷ್ಯಾವನ್ನು ಹೊರತುಪಡಿಸಿ ಮಲೇಷ್ಯಾದ ಎಸ್‌ಯು-30 ವಿಮಾನಗಳಿಗೆ ಬೆಂಬಲವನ್ನು ನೀಡುತ್ತಿರುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಕಂಪ್ಯೂಟರ್ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು
Advertisement
Advertisement
ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯ ಪ್ರತೀಕಾರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ. ಹೀಗಾಗಿ ಮಲೇಷ್ಯಾ ತನ್ನ ಸುಖೋಯ್ -30 ಯುದ್ಧವಿಮಾನಗಳಿಗೆ ಬಿಡಿಭಾಗಗಳನ್ನು ಸಂಗ್ರಹಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿದೆ. ಇದೀಗ ಭಾರತ ಪ್ಯಾಕೇಜ್‌ನ ಭಾಗವಾಗಿ ಮಲೇಷ್ಯಾಗೆ ರಷ್ಯಾ ಮೂಲದ ಎಸ್‌ಯು-30 ಯುದ್ಧವಿಮಾನಗಳಿಗೆ ನಿರ್ವಹಣೆ, ದುರಸ್ತಿ ಹಾಗೂ ಪರೀಕ್ಷೆಯ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಈ ಹಿನ್ನೆಲೆ ಕೌಲಾಲಂಪುರದ ತಂಡ ಶೀಘ್ರವೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
Advertisement
ತೇಜಸ್‌ಗೇಕೆ ಮೊದಲ ಆದ್ಯತೆ?
ಮಲೇಷ್ಯಾ ಸರ್ಕಾರ ಈಗಾಗಲೇ ಚೀನಾದ ಜೆಎಫ್-17, ದಕ್ಷಿಣ ಕೊರಿಯಾದ ಎಫ್‌ಎ-50, ರಷ್ಯಾದ ಎಂಐಜಿ-35 ಹಾಗೂ ಯಾಕ್-130 ಜೆಟ್‌ಗಳನ್ನು ನೋಡಿದೆ. ಆದರೂ ಮಲೇಷ್ಯಾ ಭಾರತದ ತೇಜಸ್‌ಅನ್ನೇ ಉತ್ತಮ ವಿಮಾನ ಎಂದು ಬಣ್ಣಿಸಿದೆ ಎಂದು ಮಾಧವನ್ ತಿಳಿಸಿದ್ದಾರೆ.
Advertisement
ಚೀನಾದ ಜೆಎಫ್-17 ಅಗ್ಗವಾಗಿದ್ದರೂ ತೇಜಸ್‌ನ ಎಂಕೆ-ಐಎ ವೇರಿಯಂಟ್‌ನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಎಸ್‌ಯು-30ಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ
ತೇಜಸ್ ವಿಶೇಷತೆ:
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ(ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಹೆಚ್‌ಎಎಲ್ ತಯಾರಿಸಿದೆ. ಇದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) ಕಾರ್ಯವನ್ನು ಆಧರಿಸಿದ್ದು, ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.