CrimeLatestMain PostNational

ಶಾಲೆಯಲ್ಲಿ ಕಂಪ್ಯೂಟರ್‌ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು

Advertisements

ಭುವನೇಶ್ವರ: ಬಾಲಿವುಡ್‍ ಸಿನಿಮಾ ಧೂಮ್‍ನಿಂದ ಪ್ರೇರಣೆಗೊಂಡ ಕಳ್ಳರ ಗುಂಪೊಂದು ಶಾಲೆಯ ಕಂಪ್ಯೂಟರ್‌ಗಳು ಹಾಗೂ ಜೆರಾಕ್ಸ್ ಯಂತ್ರಗಳನ್ನು ದೋಚಿ, ಬೋರ್ಡ್ ಮೇಲೆ ನಂಬರ್ ಬರೆದಿಟ್ಟು ಹೋದ ಘಟನೆ ಓಡಿಶಾದಲ್ಲಿ ನಡೆದಿದೆ.

ಒಡಿಶಾದ ನಬರಂಗಪುರ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಇಂದ್ರಾವತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಗೆ ನುಗ್ಗಿದ ತಂಡವು ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಜೆರಾಕ್ಸ್ ಯಂತ್ರಗಳನ್ನು, ತೂಕದ ಯಂತ್ರಗಳು ಮತ್ತು ಧ್ವನಿ ಪೆಟ್ಟಿಗೆಯನ್ನು ದೋಚಿದ್ದಾರೆ.

ನಂತರ ಈ ಕಳ್ಳರ ಗುಂಪು ಸ್ಥಳದಿಂದ ಹೊರಡುವಾಗ ಬ್ಲ್ಯಾಕ್‍ಬೋರ್ಡ್ ಮೇಲೆ ಫೋನ್ ನಂಬರ್‌ನ್ನು ಹಾಕಿ, ನಿಮ್ಮ ಹತ್ತಿರ ಸಾಧ್ಯವಾದರೆ ನಮ್ಮನ್ನು ಹಿಡಿಯಿರಿ ಎಂದು ಬರೆಯುವ ಮೂಲಕ ಪೊಲೀಸರಿಗೆ ಸವಾಲು ಹಾಕಿ ಹೋಗಿದ್ದಾರೆ. ಅಷ್ಟೇ ಅಲ್ಲದೇ ಧೂಮ್ 4 ಶೀಘ್ರದಲ್ಲೇ ಬರುತ್ತದೆ ಎಂದು ಬರೆದು ಹೋಗಿದ್ದಾರೆ.

ಈ ಘಟನೆ ನಡೆದಾಗ ಶಾಲೆಗೆ ರಜೆ ಇದ್ದರಿಂದ ಮರುದಿನ ಸಿಬ್ಬಂದಿ ಕೆಲಸಕ್ಕೆ ಬಂದಾಗ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಬಾಗಿಲು ಮುರಿದಿರುವುದನ್ನು ಗಮನಿಸಿದ್ದಾರೆ. ಇದರ ಜೊತೆಗೆ ಅಲ್ಲಿದ್ದ ಬಹುತೇಕ ಉಪಕರಣಗಳು ಕಾಣೆಯಾಗಿತ್ತು. ಇದರಿಂದಾಗಿ ಆತ ಶಾಲೆಯ ಅಧಿಕಾರಿಗಳಿಗೆ ಘಟನೆಯ ಕುರಿತು ತಿಳಿಸಿದ್ದಾನೆ. ಇದನ್ನೂ ಓದಿ: 6 ವಾರಗಳ ಗರ್ಭಿಣಿಯಾಗಿದ್ದ 10ರ ಬಾಲಕಿಗೆ ಇಂಡಿಯಾನದಲ್ಲಿ ಗರ್ಭಪಾತ

CRIME 2

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ಖತಿಗುಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳ್ಳರು ಬ್ಲ್ಯಾಕ್‍ಬೋರ್ಡ್ ಮೇಳೆ ನಮೂದಿಸಿದ ನಂಬರ್‍ಗಳು ಪೊಲೀಸರ ದಾರಿ ತಪ್ಪಿಸಲು ಅಥವಾ ಪೊಲೀಸರ ತನಿಖೆಗೆ ಸಹಾಯವಾಗಲೋ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ನೆರೆ ಮನೆಯವನಿಂದ 4ರ ಬಾಲಕಿಯ ಮೇಲೆ ಅತ್ಯಾಚಾರ

Live Tv

Leave a Reply

Your email address will not be published.

Back to top button