ಮುಂಬೈ: ಗಾಯಾಳುವಾಗಿ ಏಷ್ಯಾಕಪ್‍ನಿಂದ (Asia Cup 2022) ಹೊರಗುಳಿದಿದ್ದ ಟೀಂ ಇಂಡಿಯಾದ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಹರ್ಷಲ್ ಪಟೇಲ್ (Harshal Patel) ಟಿ20 ವಿಶ್ವಕಪ್‍ಗೆ (T20 World) ಆಯ್ಕೆ ಆಗುವುದು ಖಚಿಗೊಂಡಿದ್ದು, ಆಲ್‍ರೌಂಡರ್ ರವೀಂದ್ರ ಜಡೇಜಾ ಬಹುತೇಕ ಹೊರಗುಳಿಯುವ ಸಾಧ್ಯತೆ ಬಗ್ಗೆ ವರದಿಯಾಗಿದೆ.
Advertisement
ಮೂಲಗಳ ಪ್ರಕಾರ ಈಗಾಗಲೇ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಟಿ20 ವಿಶ್ವಕಪ್ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ವೇಗಿಗಳು ಏಷ್ಯಾಕಪ್‍ಗೂ ಮುನ್ನ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಕೈ ಸೆಳೆತಕ್ಕೊಳಗಾಗಿ ಹೊರಗುಳಿದರೆ, ಬುಮ್ರಾ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದರು. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು
Advertisement
Advertisement
ಆ ಬಳಿಕ ಬುಮ್ರಾ ಮತ್ತು ಹರ್ಷಲ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy in Bengaluru) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಚೇತರಿಕೆ ಕಂಡಿದ್ದಾರೆ. ಈ ಮೂಲಕ ಮತ್ತೆ ತಂಡಕ್ಕೆ ವಾಪಾಸ್ ಆಗಲು ಸಿದ್ಧತೆ ಆರಂಭಿಸಿದ್ದಾರೆ. ಜೊತೆಗೆ ಮುಂದಿನ ವಾರದೊಳಗಾಗಿ ಬಿಸಿಸಿಐ (BCCI) ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾವನ್ನು ಆಯ್ಕೆಮಾಡುವ ಸಾಧ್ಯತೆ ಇದೆ.
Advertisement
ಏಷ್ಯಾಕಪ್‍ನಲ್ಲಿ ಬುಮ್ರಾ ಅಲಭ್ಯತೆ ಕಾಡಿತು. ಜೊತೆಗೆ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯಗೊಂಡು ತಂಡದಿಂದ ಹೊರುಗುಳಿದಿದ್ದು, ಹಿನ್ನಡೆ ತಂದಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ
ಬುಮ್ರಾ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಮತ್ತೆ ತಂಡಕ್ಕೆ ವಾಪಸ್ ಆಗುವುದು ಬಹುತೇಕ ಖಚಿಗೊಂಡಿದ್ದು, ಆವೇಶ್ ಖಾನ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಷ್ಯಾಕಪ್‍ನಲ್ಲಿ ಶಮಿಯನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು. ಇದೀಗ ಶಮಿ ಟಿ20 ವಿಶ್ವಕಪ್ ಆಡುವುದು ಬಹುತೇಕ ಕನ್ಫರ್ಮ್ ಅಗಿದೆ.
Live Tv
[brid partner=56869869 player=32851 video=960834 autoplay=true]