– 500 ನಾಯಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯ
ಬೆಂಗಳೂರು: ಸುಪ್ರೀಂ ಕೋರ್ಟ್ (Supreme Court) ನಿರ್ದೇಶನದ ಬಳಿಕ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಡಾಗ್ ಶೆಲ್ಟರ್ (Dog Shelter) ನಿರ್ಮಾಣ ಆಗಿದೆ. ಉತ್ತರ ನಗರ ಪಾಲಿಕೆಯ ಮೇಡಿ ಅಗ್ರಹಾರದಲ್ಲಿ ಡಾಗ್ ಶೆಲ್ಟರ್ ನಿರ್ಮಾಣ ಆಗಿದ್ದು, 500 ನಾಯಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದೆ.
ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿತ್ತು. ಕೋರ್ಟ್ ನಿರ್ದೇಶನದ ಬಳಿಕ ಇದೇ ಮೊದಲ ಬಾರಿಗೆ ಪ್ರಥಮ ಡಾಗ್ ಶೆಲ್ಟರ್ ಬೆಂಗಳೂರು ಉತ್ತರ ನಗರ ಪಾಲಿಕೆಯ ಮೇಡಿ ಅಗ್ರಹಾರದಲ್ಲಿ ನಿರ್ಮಾಣ ಮಾಡಲಾಗಿದೆ. 2 ಕೋಟಿ ವೆಚ್ಚದಲ್ಲಿ 500 ನಾಯಿಗಳಿಗೆ ಆಶ್ರಯ ನೀಡುವ 25 ಬ್ಯಾರಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಬ್ಯಾರಕ್‌ನಲ್ಲಿ 20 ನಾಯಿಗಳಿಗೆ ಆಶ್ರಯ ನೀಡಬಹುದಾಗಿದೆ. ಇದನ್ನೂ ಓದಿ: ಮನೆಮುಂದೆ ಆಟವಾಡ್ತಿದ್ದಾಗ ಬೀದಿ ನಾಯಿಗಳು ದಾಳಿ – 4 ವರ್ಷದ ಬಾಲಕನ ಸ್ಥಿತಿ ಗಂಭೀರ
ಈಗ 40 ಬೀದಿನಾಯಿಗಳನ್ನು ಹಿಡಿದು ಹೊಸ ಬೀದಿನಾಯಿ ಶೆಲ್ಟರ್‌ನಲ್ಲಿ ಆಶ್ರಯ ನೀಡಲಾಗಿದೆ. ಪ್ರತಿದಿನ ಕೂಡ ಬೀದಿನಾಯಿಗಳನ್ನ ಸೆರೆ ಇಡಿದು ಬಿಡಲಾಗುತ್ತಿದೆ. ದಿನಕ್ಕೆ ಎರಡು ಬಾರಿ ಊಟ ನೀಡಲಾಗ್ತಿದೆ.
ಇದರಿಂದ ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ಕಡಿಮೆ ಆಗುತ್ತಾ? ಶೆಲ್ಟರ್ ನಿರ್ವಹಣೆ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಒಂದೇ ದಿನ ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

