ಬೆಂಗಳೂರು: ಈ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿದ್ದ ಭಾರತ ತಂಡ ಮೊದಲ ಬಾರಿಗೆ ಸೋತಿದೆ. ಈ ಮೂಲಕ 2011ರ ವಿಶ್ವಕಪ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಲೀಗ್ ಹಂತ 12 ಪಂದ್ಯಗಳನ್ನು ಗೆಲ್ಲುತ್ತಾ ಸಾಗುತ್ತಿದ್ದ ಭಾರತದ ಓಟಕ್ಕೆ ಬ್ರೇಕ್ ಬಿದ್ದಿದೆ.
2011ರ ಮಾರ್ಚ್ 12 ರಂದು ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 3 ವಿಕೆಟ್‍ಗಳ ರೋಚಕ ಜಯ ದಾಖಲಿಸಿತ್ತು. ಗೆಲ್ಲಲು 297 ರನ್ ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ಇನ್ನು ಎರಡು ಎಸೆತ ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 300 ರನ್ ಹೊಡೆದು ಗೆಲುವು ದಾಖಲಿಸಿತ್ತು. ಈ ಪಂದ್ಯದ ಬಳಿಕ ಲೀಗ್‍ನಲ್ಲಿ ವಿಂಡೀಸ್ ವಿರುದ್ಧ 4 ವಿಕೆಟ್‍ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತದ ಗೆಲುವಿನ ಓಟ ಆರಂಭಗೊಂಡಿತ್ತು.
Advertisement
Advertisement
ಲೀಗ್ ಹಂತದಲ್ಲಿ ಆಫ್ರಿಕಾ ವಿರುದ್ಧ ಭಾರತ ಸೋತಿದ್ದರೂ ಫೈನಲಿನಲ್ಲಿ ಶ್ರೀಲಂಕಾವನ್ನು ಮಣಿಸುವ ಮೂಲಕ ಎರಡನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. 2015ರ ಟೂರ್ನಿಯಲ್ಲಿ ಬಿ ತಂಡದಲ್ಲಿ ಭಾರತ ಎಲ್ಲ 6 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತ್ತು.
Advertisement
2019ರ ಟೂರ್ನಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನದ ವಿರುದ್ಧ ಜಯಗಳಿಸಿದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಒಂದು ಎಸೆತ ಕಾಣದೇ ರದ್ದಾಗಿತ್ತು.
Advertisement
ಅಂಕಪಟ್ಟಿಯಲ್ಲಿ 11 ಅಂಕಗಳೊಂದಿಗೆ ಎರಡನೇಯ ಸ್ಥಾನದಲ್ಲಿರುವ ಭಾರತಕ್ಕೆ ಇನ್ನೂ ಎರಡು ಪಂದ್ಯಗಳಿವೆ. ಮಂಗಳವಾರ ಬಾಂಗ್ಲಾ, ಶನಿವಾರ ಶ್ರೀಲಂಕಾ ವಿರುದ್ಧ ಪಂದ್ಯ ನಡೆಯಲಿದೆ. ಈ ಎರಡರ ಪೈಕಿ ಒಂದು ಪಂದ್ಯವನ್ನು ಗೆದ್ದರೂ ಭಾರತ ಸೆಮಿ ಫೈನಲ್ ಪ್ರವೇಶಿಸಲಿದೆ.
ಲೀಗ್‍ನಲ್ಲಿ ಸಾಧನೆ: 2003 ರಲ್ಲಿ 1, 2007 ರಲ್ಲಿ 2, 2011 ರಲ್ಲಿ 1, 2005 ರಲ್ಲಿ 0, 2019 ರಲ್ಲಿ 1 ಪಂದ್ಯವನ್ನು ಭಾರತ ಸೋತಿದೆ. 2003 ರಲ್ಲಿ ಭಾರತ ದ್ವಿತೀಯ ಸ್ಥಾನಿಯಾಗಿದ್ದರೆ, 2007ರಲ್ಲಿ ಭಾರತ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿತ್ತು. 2011 ರಲ್ಲಿ ಚಾಂಪಿಯನ್ ಆಗಿದ್ದರೆ, 2015 ರಲ್ಲಿ ಸೆಮಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.