– 8ಕೋಟಿ ಗುಳಿಗೆ ಉತ್ಪಾದಿಸುವ ಗುರಿ
– ಅಮೆರಿಕಾ ಕಂಪನಿ ಉತ್ಪಾದಿಸುವ ಮೊಲ್ನುಪಿರಾವಿರ್
ನವದೆಹಲಿ: ಕೊರೊನಾ ಚಿಕಿತ್ಸೆಗೆ ಅಭಿವೃದ್ಧಿ ಪಡಿಸಲಾದ ವಿಶ್ವದ ಮೊದಲ ಗುಳಿಗೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ.
ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿದ ಮೋಲ್ನುಪಿರಾವಿರ್ ಗುಳಿಗೆ ಭಾರತದಲ್ಲೂ ಉತ್ಪಾದನೆಗೆ ಅನುಮತಿ ಕೋರಿ ಹೈದರಾಬಾದ್ ಮೂಲದ ಆಪ್ಪಿ ಮಸ್ ಫಾರ್ಮ್, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.
Advertisement
Advertisement
ಈ ಗುಳಿಗೆಯ ತುರ್ತು ಬಳಕೆಗೆ ಅನುಮೋದನೆ ದೊರೆತರೆ ಕಂಪನಿ ತಿಂಗಳಲ್ಲಿ 8 ಕೋಟಿ ಗುಳಿಗೆಯನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆ ಅಂದಾಜು 30 ರೂಪಾಯಿ ದರ ಇರಲಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್
Advertisement
Advertisement
ಒಬ್ಬ ಕೋವಿಡ್ ರೋಗಿ ಚಿಕಿತ್ಸೆಗಾಗಿ ಇಂಥ ಗುಳಿಗೆಗಳನ್ನು ಬುಂಗ ಬೇಕಾಗುತ್ತದೆ. ಅದಕ್ಕೆ ಒಟ್ಟು ಅಂದಾಜು ರೂ.1196 ವೆಚ್ಚ ತಗುಲಬಹುದು ಎಂದಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು
ಸೌಮ್ಯ ಪ್ರಮಾಣದ ಸೋಂಕು ಇರುವ ರೋಗಿಗಳ ಮೇಲೆ ಗುಳಿಗೆ ಪ್ರಯೋಗಿಸಲು ಆಪ್ಟಿಮಸ್ ಫಾರ್ಮ್ ಕಳೆದ ಮೇನಲ್ಲಿ ಭಾರತೀಯ ಜೌಷಧ ಮಹಾ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ, ಮೊಲ್ನುಪಿರಾವಿರ್ ಅಂತಿಮ ಹಂತದ ಪರೀಕ್ಷೆ ಮುಕ್ತಾಯವಾಗಿದ್ದು ಗುಳಿಗೆ ಸೇವಿಸಿದ 5ನೇ ದಿನದಲ್ಲಿ ಶೇ.78ರಷ್ಟು ರೋಗಿಗಳ ವರದಿ ಕೋವಿಡ್ ನೆಗೆಟಿವ್ ಬಂದಿದೆ.