ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಗುರುವಾರ ಚೆನ್ನೈನಲ್ಲಿ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಯಶಸ್ವೀ ಪರೀಕ್ಷೆ ನಡೆಸಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್‌ನಲ್ಲಿ ಮೊದಲ ಬಾರಿಗೆ 5ಜಿ ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಅಶ್ವಿನಿ ವೈಷ್ಣವ್, ಇಡೀ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ ಎಂದರು.
Advertisement
Advertisement
ಇದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಸಾಕ್ಷಾತ್ಕಾರವಾಗಿದೆ. ಭಾರತದಲ್ಲೇ ತಯಾರಾಗುವ 4ಜಿ ಹಾಗೂ 5ಜಿ ತಂತ್ರಜ್ಞಾನದ ಸ್ಟಾಕ್ ಅನ್ನು ಇತರ ದೇಶಗಳಿಗೂ ವಿತರಿಸುವುದು ಅವರ ಗುರಿಯಾಗಿದೆ. ಈ ಸಂಪೂರ್ಣ ತಂತ್ರಜ್ಞಾನದ ಯಶಸ್ಸಿನೊಂದಿಗೆ ನಾವು ಜಗತ್ತನ್ನೇ ಗೆಲ್ಲಬೇಕು ಎಂದು ವೈಷ್ಣವ್ ಹೇಳಿದರು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ
Advertisement
Aatmanirbhar 5G ????????
Successfully tested 5G call at IIT Madras. Entire end to end network is designed and developed in India. pic.twitter.com/FGdzkD4LN0
— Ashwini Vaishnaw (@AshwiniVaishnaw) May 19, 2022
Advertisement
ದೂರಸಂಪರ್ಕ ಇಲಾಖೆ 5ಜಿ ನೆಟ್‌ವರ್ಕ್ ಹರಾಜಿನ ಬಗ್ಗೆ ಮುಂದಿನ ವಾರದಲ್ಲಿ ಅಂತಿಮ ಅನುಮೋದನೆಗೆ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಇದೇ ವರ್ಷದ ಕೊನೆಯಲ್ಲಿ ಗ್ರಾಹಕರ ಕೈಗೆ 5ಜಿ ನೆಟ್‌ವರ್ಕ್ ಲಭಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ 5ಜಿ ಟೆಸ್ಟ್‌ಬೆಡ್ ಅನ್ನು ಉದ್ಘಾಟಿಸಿದ್ದರು. ಇದೀಗ ಅದೇ ಕೇಂದ್ರದಲ್ಲಿ ಸಂಪರ್ಕ ಸಚಿವ ದೇಶದಲ್ಲಿ ಮೊದಲ ಬಾರಿಗೆ 5ಜಿ ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಪರೀಕ್ಷಿಸಿದ್ದಾರೆ.