LatestLeading NewsMain PostNationalTechTelecom

ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ?

Advertisements

ಪ್ರಸ್ತುತ ಸಮಾಜದಲ್ಲಿ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ತುಂಬಾ ವಿರಳ. ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಹೊಸ ವೈಶಿಷ್ಟ್ಯದೊಂದಿಗೆ ಮೂಡಿಬಂದಿದೆ.

ಈ ಆ್ಯಪ್‍ನಲ್ಲಿ ಗ್ರೂಪ್ ಮಾಡುವುದರಿಂದ ಅದರಲ್ಲಿ ಬರುವ ಕೆಲವು ಸಂದೇಶಗಳು ಕಿರಿಕಿರಿ ಉಂಟು ಮಾಡುತ್ತಿರುತ್ತೆ. ಆದರೆ ನಾವು ಅದರಿಂದ ನಿರ್ಗಮಿಸಲು ಆಗುತ್ತಿರುವುದಿಲ್ಲ. ಆದರೆ ಈಗ ವಾಟ್ಸಪ್ ಇದಕ್ಕೊಂದು ಸರಳ ಮಾರ್ಗ ಕೊಟ್ಟಿದೆ. ಒಂದು ವೇಳೆ ನಮಗೆ ಗ್ರೂಪ್‍ನಲ್ಲಿ ಇರಲು ಇಷ್ಟವಿಲ್ಲದೇ ಅಲ್ಲಿಂದ ನಿರ್ಗಮಿಸಿದರೆ ಗ್ರೂಪ್ ಆಡ್ಮಿನ್‍ಗೆ ಬಿಟ್ಟು ಬೇರೆ ಯಾರಿಗೂ ತಿಳಿಯದಂತೆ ಮಾಡಲಾಗುತ್ತಿದೆ.

WABetaInfo ಪ್ರಕಾರ, ಈ ಅಪ್ಲಿಕೇಶನ್ ಇನ್ನೂ ಸ್ವಲ್ಪದಿನಗಳಲ್ಲಿ ಅಪ್ಡೇಟ್ ಆಗುತ್ತೆ. ಇದರ ಹೊಸ ವೈಶಿಷ್ಟ್ಯವೆಂದರೆ, ವಾಟ್ಸಪ್ ಬಳಕೆದಾರರು ಗುಂಪನ್ನು ತೊರೆದಾಗ, ನಿರ್ಗಮನದ ಬಗ್ಗೆ ಗ್ರೂಪ್ ಆಡ್ಮಿನ್‍ಗೆ ಮಾತ್ರ ತಿಳಿಯುತ್ತೆ. ಇತರ ಬಳಕೆದಾರರಿಗೆ ಯಾವುದೇ ರೀತಿ ಗೊತ್ತಾಗುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ:  ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ 

ಪ್ರಸ್ತುತ, ಬಳಕೆದಾರರು ಗುಂಪಿನಿಂದ ನಿರ್ಗಮಿಸಿದಾಗ, ವಾಟ್ಸಪ್ ಗ್ರೂಪ್‍ನಲ್ಲಿರುವ ಎಲ್ಲ ಸದಸ್ಯರಿಗೂ ನೋಟಿಫಿಕೇಷನ್ ಹೋಗುತ್ತೆ. ಇದನ್ನು ಮೊದಲು ಬೀಟಾದಲ್ಲಿ ಪ್ರಯೋಗಿಸಿ ನಂತರ ವಾಟ್ಸಪ್‍ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿ ಉಲ್ಲೇಖಿಸಿದೆ. ಇತ್ತೀಚೆಗೆ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ಎಮೋಜಿ, ಫೈಲ್‍ಗಳು ಮತ್ತು ಗುಂಪುಗಳನ್ನು ಒಳಗೊಂಡಂತೆ ಹೊಸ ವೈಶಿಷ್ಟ್ಯಗಳನ್ನು ಹೊರತರಲಾಗುವುದು ಎಂದು ಹೇಳಿದೆ.

Leave a Reply

Your email address will not be published.

Back to top button