ನವದೆಹಲಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎರಡು ದಿನಗಳ ಈವೆಂಟ್ ಉದ್ಘಾಟಿಸಿದ ನಂತರ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ ಪೋವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ‘ಜೈವಿಕ-ಆರ್ಥಿಕತೆ’ ಕಳೆದ ಎಂಟು ವರ್ಷಗಳಲ್ಲಿ ಎಂಟು ಪಟ್ಟು ಬೆಳೆದಿದೆ. ಯುಎಸ್‍ಡಿ 10 ಶತಕೋಟಿಯಿಂದ ಯುಎಸ್‍ಡಿ 80 ಶತಕೋಟಿ ತಲುಪಿದೆ. ನಮ್ಮ ದೇಶ ಅಭಿವೃದ್ಧಿ ರಾಷ್ಟ್ರವಾಗಲೂ ಸಮೀಪವಿದೆ ಎಂದು ಹೇಳಿದರು.
Advertisement
Advertisement
ದೇಶದ ಅಭಿವೃದ್ಧಿಗೆ ವೇಗವನ್ನು ನೀಡಲು, ಪ್ರತಿಯೊಂದು ಕ್ಷೇತ್ರವನ್ನು ಬಲಪಡಿಸುವಲ್ಲಿ ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಇತರರನ್ನು ನಿರ್ಲಕ್ಷಿಸಿ ಕೆಲವು ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಹಿಂದಿನ ವಿಧಾನವನ್ನು ನಮ್ಮ ಸರ್ಕಾರ ಬದಲಾಯಿಸಿದೆ ಎಂದು ಪ್ರತಿಪಾದಿಸಿದರು.
Advertisement
ಕಳೆದ ಎಂಟು ವರ್ಷಗಳಲ್ಲಿ ದೇಶದ ಸ್ಟಾರ್ಟ್ಅಪ್‌ಗಳ ಸಂಖ್ಯೆ ಕೆಲವು ನೂರರಿಂದ 70,000 ಕ್ಕೆ ಏರಿದೆ. ನಮ್ಮ ಸರ್ಕಾರವು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಕೆಲಸ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆ ಬರುತ್ತಿದೆ: ಮುತಾಲಿಕ್
Advertisement
ಪ್ರತಿಭೆಗಳ ಬದಲಾವಣೆಯ ಕುರಿತು ಮಾತನಾಡಿದ ಅವರು, ಬಯೋಟೆಕ್ ಕ್ಷೇತ್ರದಲ್ಲಿ ಹೂಡಿಕೆದಾರರ ಸಂಖ್ಯೆ ಒಂಬತ್ತು ಪಟ್ಟು ಹೆಚ್ಚಾಗಿದೆ ಮತ್ತು ಬಯೋಟೆಕ್ ಇನ್‌ಕ್ಯುಬೇಟರ್‌ಗಳು ಆರ್ಥಿಕ ಸಹಾಯವು ಏಳು ಪಟ್ಟು ಹೆಚ್ಚಾಗಿದೆ. 70,000 ಸ್ಟಾರ್ಟ್ಅಪ್‌ಗಳು ಸುಮಾರು 60 ವಿವಿಧ ಕೈಗಾರಿಕೆಗಳಲ್ಲಿ ಸ್ಥಾಪನೆಯಾಗಿವೆ ಎಂದು ಉಲ್ಲೇಖಿಸಿದರು.
2014ರಲ್ಲಿ ಬಯೋಟೆಕ್ ಇನ್‌ಕ್ಯುಬೇಟರ್‌ಗಳ ಸಂಖ್ಯೆ 6 ರಿಂದ 75ಕ್ಕೆ ಏರಿಕೆಯಾಗಿದೆ. ಬಯೋಟೆಕ್ ಉತ್ಪನ್ನಗಳು 10 ಉತ್ಪನ್ನಗಳಿಂದ ಇಂದು 700ಕ್ಕೂ ಹೆಚ್ಚಿವೆ ಎಂದು ಹೇಳಿದರು.