ಬೆಂಗಳೂರು: ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೋರ್ವನ ಆತ್ಮಾಹುತಿ ದಾಳಿಯಿಂದಾಗಿ 40 ಮಂದಿ ಯೋಧರು ಹುತಾತ್ಮರಾದ ಬೆನ್ನಲ್ಲೇ ಇದೀಗ ಭಾರತೀಯ ಸೇನೆ ಪ್ರತಿಕಾರ ತೀರಿಸಿದ್ದು, ಇಡೀ ದೇಶವೇ ವೀರ ಯೋಧರಿಗೆ ಬಿಗ್ ಸೆಲ್ಯೂಟ್ ಹೊಡೆಯುತ್ತಿದೆ.
ಹೌದು. ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ನೀಡಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಎಲ್ಲರ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ `How is The Josh Sir’ ಎಂದು ಬರೆದುಕೊಂಡು ಭಾರತೀಯ ಯೋಧರಿಗೆ ಬಿಗ್ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಈ ಮೂಲಕ ನಮ್ಮ ಸೈನಿಕರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
Advertisement
Advertisement
ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ. ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.
Advertisement
Advertisement
ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ ಎನ್ನಲಾಗುತ್ತಿದ್ದು, ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಪುಲ್ವಾಮಾ ದಾಳಿಯ 12 ನೇ ದಿನಕ್ಕೆ ಭಾರತೀಯ ಪ್ರತಿಕಾರ ತೀರಿಸಿರುವುದು ಸ್ಪಷ್ಟವಾಗಿದ್ದು, ಈ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು `ಇದು ಮೋದಿ ಭಾರತ’ ಎಂದು ಹೇಳುವ ಮೂಲಕ ದಾಳಿ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಾಂಬ್ ದಾಳಿಯ ವೇಳೆ ಮಿರಾಜ್ ಗೆ ಸುಖೋಯ್ ಯುದ್ಧ ವಿಮಾನ ಕೂಡ ಬೆಂಗಾವಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡೆ ಬಾಂಬ್ ಹಾಕಬಹುದಾದ ಸಾಮಥ್ರ್ಯ ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ ` ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಯೋಧರು ಹುತಾತ್ಮ:
ಫೆ.14 ರ ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು.
ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದರು ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಸೈನಿಕರ ವಾಹನವನ್ನು ಉಗ್ರರು ಹಿಂಬಾಲಿಸಿಕೊಂಡು ಬಂದಿದ್ದರು. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸುಗಳು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದರು. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿತ್ತು. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.
ಉರಿ ದಾಳಿ:
ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ 2016ರ ಸೆಪ್ಟೆಂಬರ್ 18ರಂದು ನಾಲ್ವರು ಉಗ್ರರು ದಾಳಿ ನಡೆಸಿ 18 ಮಂದಿ ಯೋಧರನ್ನು ಹತ್ಯೆ ಮಾಡಿದ್ದರು. ಭಾರತೀಯ ಸೇನೆ ಸಮವಸ್ತ್ರ ಧರಿಸಿ ಅಕ್ರಮವಾಗಿ ಒಳ ನುಗ್ಗಿದ್ದ ಈ ಪಾಪಿಗಳು ಯೋಧರು ಮಲಗಿದ್ದಾಗ ದಾಳಿ ನಡೆಸಿ ಕೃತ್ಯ ಎಸಗಿದ್ದರು. ಇಲ್ಲಿಯವರೆಗೆ ದೇಶದ ಇತಿಹಾಸಲ್ಲಿ ಅತಿ ದೊಡ್ಡ ದಾಳಿ ಎಂಬ ಕುಖ್ಯಾತಿ ಗಳಿಸಿತ್ತು. ಈಗ ಇದಕ್ಕಿಂತಲೂ ಅತಿ ದೊಡ್ಡ ದಾಳಿ ನಡೆದಿದ್ದು ಉಗ್ರರ ಪಾಪಿ ಕೃತ್ಯಕ್ಕೆ ಅಮಾಯಕ 39 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv