ಸಿಡ್ನಿ: ಆಸ್ಟ್ರೇಲಿಯಾದಲ್ಲಿ ( Australia) ತ್ರಿವರ್ಣಧ್ವಜ (Tricolour) ಹಿಡಿದ ಭಾರತೀಯರ (Indians) ಮೇಲೆ ಖಲಿಸ್ತಾನಿ (Khalistan) ಬೆಂಬಲಿಗರು ದಾಳಿ ನಡೆಸಿದ್ದಾರೆ.
ಈ ವೀಡಿಯೋವನ್ನು ಬಿಜೆಪಿ (BJP) ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಹಂಚಿಕೊಂಡಿದ್ದಾರೆ. ಸಮಾಜ ವಿರೋಧಿ ಚಟುವಟಿಕೆಯನ್ನು ಎದುರಿಸಬೇಕು ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ನಡೆಸುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಖಂಡಿಸುತ್ತೇನೆ. ಈ ಚಟುವಟಿಕೆಗಳಿಂದ ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುತ್ತಿರುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
Advertisement
ವೀಡಿಯೋದಲ್ಲಿ ಏನಿದೆ?: ಖಲಿಸ್ತಾನಿ ಧ್ವಜವನ್ನು ಬೀಸುತ್ತಿರುವ ಗುಂಪೊಂದು ತ್ರಿವರ್ಣ ಧ್ವಜವನ್ನು ಹೊತ್ತ ಭಾರತೀಯರ ಮೇಲೆ ದಾಳಿ ನಡೆಸಿದೆ. ಖಲಿಸ್ತಾನಿ ಪರದ ತಂಡ ರಾಡ್‍ಗಳನ್ನು ಹಿಡಿದು ಮತ್ತೊಂದು ಗುಂಪಿನ ಮೇಲೆ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೇ ಈ ವೇಳೆ ತ್ರಿವರ್ಣ ಧ್ವಜವನ್ನು ರಸ್ತೆಗೆ ಎಸೆದಿದ್ದಾರೆ.
Advertisement
I strongly condemn anti India activities by pro Khalistani in Australia. Anti-social elements that are trying to disrupt the peace & harmony of the country with these activities, must be dealt with strongly and culprits must be brought to books.@ANI pic.twitter.com/xMMxNTQscc
— Manjinder Singh Sirsa (@mssirsa) January 29, 2023
ಘಟನೆ ವೇಳೆ ಐವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಮುಸ್ಲಿಂ ಮಹಿಳೆಯರು ರೆಡ್ಡಿ ಪಕ್ಷಕ್ಕೆ ಸೇರ್ಪಡೆ
ದಾಳಿಯನ್ನು ಖಂಡಿಸಿರುವ ವಿಕ್ಟೋರಿಯಾ ಪೊಲೀಸರು, ಹಿಂಸಾತ್ಮಕ ದಾಳಿಯ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ಇಬ್ಬರು ವ್ಯಕ್ತಿಗಳು ತಮ್ಮ 30 ರ ಹರೆಯದವರಾಗಿದ್ದಾರೆ ಎಂದು ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಕೆಲವೇ ವಾರಗಳ ನಂತರ ಈ ಘಟನೆ ನಡೆದಿದೆ. ಮೆಲ್ಬೋರ್ನ್‍ನಲ್ಲಿ ಕಳೆದ ಕೆಲವು ವಾರಗಳಲ್ಲಿ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳಿಂದ ಮೂರು ದೇವಾಲಯಗಳನ್ನು ವಿರೂಪಗೊಳಿಸಲಾಗಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ವಾಟರ್ ಬಿಲ್ ಕಟ್ಟದಿದ್ದಕ್ಕೆ ಕನೆಕ್ಷನ್ ಕಟ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k