ಹಿರೋಷಿಮಾ: ಶನಿವಾರ ಎಫ್‍ಐಎಚ್ ಹಾಕಿ ಸರಣಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಚಿಲಿ ತಂಡವನ್ನು ಸೋಲಿಸಿ, ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ.
ಗುರ್ಜಿತ್ ಕೌರ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಚಿಲಿ ತಂಡದ ವಿರುದ್ಧ ಭಾರತ 4-2 ಗೋಲುಗಳಿಂದ ಜಯಗಳಿಸಿದೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಭಾರತ ಸ್ಥಾನ ಪಡೆದಿದೆ. ಭಾನುವಾರ ನಡೆಯುವ ಫೈನಲ್ ಸುತ್ತಿನಲ್ಲಿ ಜಪಾನ್ ತಂಡದ ವಿರುದ್ಧ ಭಾರತ ಆಡಲಿದೆ.
Advertisement
Advertisement
ಜಪಾನ್ ತಂಡವು ಇನ್ನೊಂದು ಸೆಮಿಫೈನಲ್‍ನಲ್ಲಿ ರಷ್ಯಾದ ವಿರುದ್ಧ ಆಟವಾಡಿತ್ತು. ಈ ವೇಳೆ `ಪೆನಾಲ್ಟಿ ಶೂಟೌಟ್’ ನಂತರ 3-1 ಗೋಲುಗಳಿಂದ ರಷ್ಯಾ ತಂಡವನ್ನು ಮಣಿಸಿ, ನಿಗದಿತ 60 ನಿಮಿಷಗಳ ಆಟದ ನಂತರ ಸ್ಕೋರ್ 1-1 ರಲ್ಲಿ ಸಮಬಲ ಸಾಧಿಸಿತು.
Advertisement
ಭಾರತ ಹಾಗೂ ಚಿಲಿ ಮಧ್ಯೆ ನಡೆದ ಮೊದಲ ಸೆಮಿಫೈನಲ್‍ನ ಮೊದಲ ಕ್ವಾರ್ಟರ್ ಗೋಲಿಲ್ಲದೇ ಅಂತ್ಯವಾಗಿತ್ತು. ಬಳಿಕ ಅಚ್ಚರಿ ಎನ್ನುವಂತೆ ಚಿಲಿ ತಂಡ 18ನೇ ನಿಮಿಷ ಮುನ್ನಡೆಯಲ್ಲಿತ್ತು. ಆದರೆ ಪ್ರತಿದಾಳಿಯೊಂದರಲ್ಲಿ ಒದಗಿದ ಅವಕಾಶದಲ್ಲಿ ಕ್ಯಾರೊಲಿನಾ ಗಾರ್ಸಿಯಾ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಈ ವೇಳೆ ಭಾರತ ಸ್ವಲ್ಪ ವಿಚಲಿತಗೊಂಡರೂ ತಮ್ಮ ಪ್ರತಿದಾಳಿ ನಡೆಸಿತು. ನಾಲ್ಕು ನಿಮಿಷಗಳಲ್ಲೇ ‘ಪೆನಾಲ್ಟಿ ಕಾರ್ನರ್’ ಅವಕಾಶವೊಂದನ್ನು ಪರಿವರ್ತಿಸಿದ ಗುರ್ಜಿತ್ ಕೌರ್ ತಂಡ ಗೋಲಿನ ಅಂತರ ಸಮ ಮಾಡಿಕೊಳ್ಳಲು ನೆರವಾದರು. ಆ ಬಳಿಕ ವಿರಾಮದ ವೇಳೆ ಎರಡು ತಂಡದ ಸ್ಕೋರ್ 1-1ರಲ್ಲಿ ಸರಿಸಮವಾಯಿತು.
Advertisement
ಸದ್ಯ ವಿಶ್ವ ಕ್ರಮಾಂಕದಲ್ಲಿ ಭಾರತ 9ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ಸ್ ನ 31ನೇ ನಿಮಿಷದ ಆಟದಲ್ಲಿ ನವನೀತ್ ಕೌರ್ ಗಳಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತು. 25 ಯಾರ್ಡ್ ವೃತ್ತದಲ್ಲಿ ಚೆಂಡನ್ನು ನಿಯಂತ್ರಿಸಿದ ನವನೀತ್ ಕೌರ್, ನಂತರ ಎದುರಾಳಿ ತಂಡವನ್ನು ಹಿಂದಿಕ್ಕಿ ಮುನ್ನುಗ್ಗಿ ಗೋಲ್ ಬಾರಿಸಿದರು. ಗುರ್ಜಿತ್ ಕೌರ್ 37ನೇ ನಿಮಿಷ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಯಶಸ್ಸು ಗಳಿಸಿ ಭಾರತ ಗೆಲುವಿನತ್ತ ಸಾಗಲು ನೆರವಾದರು.
ಬಳಿಕ 43ನೇ ನಿಮಿಷ ಭಾರತ ರಕ್ಷಣಾ ಆಟಗಾರ್ತಿಯರು ಚಂಡನ್ನು ತಡೆಯುವ ಯತ್ನದಲ್ಲಿ ಕೊಂಚ ಎಡವಟ್ಟಾಗಿ ಚಿಲಿ ತಂಡ ಎರಡನೇ ಗೋಲ್ ಗಳಿಸಿ ಸ್ಕೋರ್ 3-2ಕ್ಕೆ ಇಳಿಸಿದರು. ಆದರೆ ಭಾರತ ತಂಡದ ಕ್ಯಾಪ್ಟನ್ ರಾಣಿ ರಾಮಪಾಲ್ ಅವರು 57ನೇ ನಿಮಿಷದಲ್ಲಿ ಗೋಲ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಮೂಲಕ 2020 ಒಲಿಂಪಿಕ್ಸ್ ಅರ್ಹತಾ ಫೈನಲ್ಸ್ ಗೆ ಜಪಾನ್ ಹಾಗೂ ಭಾರತ ಮಹಿಳಾ ಹಾಕಿ ತಂಡ ಆಡುವ ಅವಕಾಶ ಪಡೆದಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]