ಇಸ್ಲಾಮಾಬಾದ್: 90 ವರ್ಷದ ಭಾರತದ ಹಿರಿಯ ಮಹಿಳೆಯೊಬ್ಬರು 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡುವ ಮೂಲಕ ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ರೀನಾ ಛಿಬ್ಬರ್ ವರ್ಮಾ(90) ಅವರು ವಾಘಾ ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯ ಪ್ರೇಮ್ ನಿವಾಸ್‍ನಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ. ಇದು ರೀನಾ ಅವರ ಬಹು ಕಾಲಗಳ ಕನಸಾಗಿತ್ತು.
Advertisement
Advertisement
ಭಾರತ ಪಾಕಿಸ್ತಾನ ವಿಭಜನೆಯಾದಾಗ ಅವರು ರಾವಲ್ಪಿಂಡಿಯಿಂದ ಪುಣೆಗೆ ಬಂದು ವಾಸಿಸಲು ಪ್ರಾರಂಭಿಸಿದರು. ರೀನಾ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.
Advertisement
ಈ ಬಗ್ಗೆ ಮಾತನಾಡಿದ ಅವರು, ಆ ಸಮಯದಲ್ಲಿ ಮಾಡರ್ನ್ ಸ್ಕೂಲ್‍ನಲ್ಲಿ ಓದುತ್ತಿದ್ದೆ. ನಾಲ್ವರು ಒಡಹುಟ್ಟಿದವರೂ ಅದೇ ಶಾಲೆಗೆ ಹೋಗಿದ್ದರು. ನನ್ನ ಸಹೋದರ ಮತ್ತು ಸಹೋದರಿ ಕೂಡ ಮಾಡರ್ನ್ ಸ್ಕೂಲ್ ಬಳಿ ಇರುವ ಗಾರ್ಡನ್ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ನೆನಪಿಸಿಕೊಂಡರು.
Advertisement
ವಿಭಜನೆಗೂ ಮುನ್ನ ಮುಸ್ಲಿಂ ಸ್ನೇಹಿತರು ಮನೆಗೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಯಾವುದೇ ಹಿಂದೂ, ಮುಸ್ಲಿಂ ಎನ್ನುವ ಭೇದ, ಭಾವ ಇರಲಿಲ್ಲ. ವಿಭಜನೆಯ ನಂತರದಲ್ಲಿ 2 ಧರ್ಮಗಳಲ್ಲಿ ಸಂಘರ್ಷ ನಡೆಯುತ್ತಿದೆ. ಭಾರತ ವಿಭಜನೆಯ ನಿರ್ಧಾರ ತಪ್ಪಾಗಿದ್ದರೂ, ಅದು ಈಗ ಸಂಭವಿಸಿದೆ. ಆದರೆ ವೀಸಾ ನಿರ್ಬಂಧವನ್ನು ಸಡಿಲಿಸುವ ಮೂಲಕ 2 ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ರೀನಾ ವರ್ಮಾ 1965ರಲ್ಲಿ ಪಾಕಿಸ್ತಾನಕ್ಕೆ ತೆರಳಲು ವೀಸಾಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಯುದ್ಧದ ಕಾರಣದಿಂದಾಗಿ ಈ ಪ್ರಯತ್ನ ವಿಫಲವಾಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್
ಇದಾದ ಬಳಿಕ ಮತ್ತೆ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾಗ ಅದನ್ನು ನಿರಾಕರಿಸಲಾಗಿತ್ತು. ಈ ಬಳಿಕ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಬ್ಬಾನಿ ಖಾರ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವೀಸಾವನ್ನು ಪಡೆದುಕೊಂಡರು. ಸೌಹಾರ್ದ ಸೂಚಕದ ಭಾಗವಾಗಿ ಪಾಕಿಸ್ತಾನಿ ಹೈಕಮಿಷನ್ ಮಹಿಳೆಗೆ ಮೂರು ತಿಂಗಳ ವೀಸಾವನ್ನು ನೀಡಿದೆ. ಇದನ್ನೂ ಓದಿ: ತಡೆಗೋಡೆ ಕುಸಿತ : ಮಡಿಕೇರಿ – ಮಂಗಳೂರು ರಸ್ತೆ ಸಂಚಾರ ಬಂದ್