ಸಿಡ್ನಿ: ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುತ್ತಿಟ್ಟಿದೆ. 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಜಯಶಾಲಿಯಾಗಿದೆ.
ಕೊನೆಯ ದಿನವಾದ ಇಂದು ಮಂದ ಬೆಳಕು ಮತ್ತು ಮಳೆಯ ಹಿನ್ನೆಲೆಯಲ್ಲಿ ಒಂದು ಎಸೆತವನ್ನು ಕಾಣದೇ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಈ ಸರಣಿಯನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದ ವಿಶ್ವದ ಐದನೇ ತಂಡವಾಗಿ ಟೀಂ ಇಂಡಿಯಾ ಹೊರ ಹೊಮ್ಮಿದೆ. ಇದಕ್ಕೂ ಮೊದಲು ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಆಸ್ಟ್ರೇಲಿಯಾ ಜೊತೆಗಿನ ಟೆಸ್ಟ್ ಸರಣಿಯನ್ನು ಗೆದ್ದಿವೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ಐದನೇ ಮತ್ತು ಏಷ್ಯಾ ಖಂಡದ ಮೊದಲ ದೇಶದ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ.
Advertisement
Advertisement
ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದು ಆಸೀಸ್ ಗೆ ಫಾಲೋಆನ್ ನೀಡಿತ್ತು. ಈ ಪಂದ್ಯದಲ್ಲಿ 193 ರನ್ ಸಿಡಿಸಿ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Advertisement
ಟೀಂ ಇಂಡಿಯಾ 1947-78ರಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೆಸ್ಟ್ ಸರಣಿ ಆಡಿತ್ತು. ಇದೂವರೆಗೂ 12 ಸರಣಿಗಳನ್ನು ಟೀಂ ಇಂಡಿಯಾ ಆಡಿದ್ದು, ಇದು ಮೊದಲ ಸರಣಿ ಜಯವಾಗಿದೆ. ಟೀಂ ಇಂಡಿಯಾ 8 ಸರಣಿಗಳಲ್ಲಿ ಸೋಲು ಕಂಡಿದ್ದು, ಮೂರು ಸರಣಿ ಡ್ರಾ ಮಾಡಿಕೊಂಡಿದೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಬಾರಿಯ ಸರಣಿಯಲ್ಲಿ ಎರಡು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. 1977ರ ಐದು ಪಂದ್ಯದ ಸರಣಿಯಲ್ಲಿ ಎರಡು ಟೆಸ್ಟ್ ಗಳನ್ನು ಗೆದ್ದುಕೊಂಡಿತ್ತು.
Advertisement
ವಿದೇಶದಲ್ಲಿ 19ನೇ ಟೆಸ್ಟ್ ಸರಣಿ ಗೆಲುವು:
ಭಾರತೀಯ ಕ್ರಿಕೆಟ್ ತಂಡ ಇದೂವರೆಗೂ ವಿದೇಶದಲ್ಲಿ 82 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 19ರಲ್ಲಿ ಗೆಲುವು, 15 ಡ್ರಾ ಮತ್ತು 48ರಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ ವಿರುದ್ಧ 18, ಆಸ್ಟ್ರೇಲಿಯಾ ವಿರುದ್ಧ 12, ವೆಸ್ಟ್ ಇಂಡೀಸ್ ವಿರುದ್ಧ 11, ನ್ಯೂಜಿಲೆಂಡ್ ವಿರುದ್ಧ 9, ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆಗೆ 8, ದಕ್ಷಿಣ ಆಫ್ರಿಕಾ ವಿರುದ್ಧ 7, ಬಾಂಗ್ಲಾದೇಶ ವಿರುದ್ಧ 5 ಹಾಗು ಜಿಂಬಾಬ್ವೆ ವಿರುದ್ಧ 4 ಟೆಸ್ಟ್ ಸರಣಿಗಳನ್ನು ಟೀಂ ಇಂಡಿಯಾ ಆಡಿದೆ.
ಸಂಕ್ಷೀಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ – 167.2 ಓವರ್ ಗಳಲ್ಲಿ 622/7 ಡಿಕ್ಲೇರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 104.5 ಓವರ್ ಗಳಲ್ಲಿ 300/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ – 4 ಓವರ್ ಗಳಲ್ಲಿ 6/0
Q: "Is this your best achievement?"
Kohli: "By far. It has to be at the top of the pile!"
Absolute #scenes in Sydney, where the Indian team are celebrating winning a Test series in Australia for the first time! #AUSvIND pic.twitter.com/THu44fDRo3
— ICC (@ICC) January 7, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv