ಟೊರಂಟೊ: ಭಾರತೀಯ ಮೂಲದ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಬರ್ಬರವಾಗಿ ಕೊಂದ ಘಟನೆ ಕೆನಡಾದ ಟೊರಂಟೊದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ಕಾರ್ತಿಕ್ ವಾಸುದೇವ್ ಮೃತ ವಿದ್ಯಾರ್ಥಿ. ಕಾರ್ತಿಕ್ ಅವರು ಶುಕ್ರವಾರ ಸಂಜೆ ಟೊರಂಟೊದ ಶೆನ್ ಬಾರ್ನೆ ಸಬ್ ವೇ ರೈಲು ನಿಲ್ದಾಣದ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಮುಸುಕು ಹಾಕಿಕೊಂಡು ಬಂದಿದ್ದು, ವಿದ್ಯಾರ್ಥಿ ಮೇಲೆ ಮನಬಂದತೆ ಗುಂಡು ಹಾರಿಸಿದ್ದಾನೆ.
Advertisement
Advertisement
ಈ ವೇಳೆ ರೈಲ್ವೇ ನಿಲ್ದಾಣದ ಸಿಬ್ಬಂದಿ ಕಾರ್ತಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಯು ಟೊರಂಟೋದ ಸೆನೆಕಾ ಕಾಲೇಜಿನಲ್ಲಿ ಎಮ್‍ಬಿಎ ವ್ಯಾಸಂಗ ಮಾಡುತ್ತಿದ್ದರು. ಕಾರ್ತಿಕ್ ಅವರ ನಿಧನಕ್ಕೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಸೆನೆಕಾ ಕಾಲೇಜಿನ ಸಿಬ್ಬಂದಿ ವರ್ಗವೂ ಸಂತಾಪ ವ್ಯಕ್ತಪಡಿಸಿವೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ
Advertisement
ಘಟನೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಈ ದುರಂತ ಘಟನೆಯಿಂದ ನಾನು ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ.
Advertisement
ಮೃತ ವಿದ್ಯಾರ್ಥಿಯ ತಂದೆಯು ಮಗನ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, ಕೆನಡಾ ತುಂಬಾ ಸುರಕ್ಷಿತವಾಗಿದೆ. ನನ್ನ ಬಗ್ಗೆ ಚಿಂತಸಬೇಡಿ ಅಂತ ನನ್ನ ಮಗ ಯಾವಾಗಲೂ ಹೇಳುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ
ಕಾರ್ತಿಕ್ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಹಂತಕನ ಉದ್ದೇಶ ಏನಿತ್ತೇಂಬುವುದು ಇನ್ನೂ ತಿಳಿದು ಬಂದಿಲ್ಲ. ಆರೋಪಿ ಬಂಧನಕ್ಕೆ ಟೊರಂಟೋ ಪೊಲೀಸರು ಬಲೆ ಬಿಸಿದ್ದಾರೆ.
/p>