ಮೆಲ್ಬರ್ನ್: ಸೆಲ್ಫೀ ತೆಗೆದುಕೊಳ್ಳಲು ಹೋಗಿ 40 ಮೀಟರ್ ಎತ್ತರದಿಂದ ಸಮುದ್ರಕ್ಕೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಅಂಕಿತ್(20) ಮೃತಪಟ್ಟ ಯುವಕ. ಅಂಕಿತ್ ತನ್ನ ಸ್ನೇಹಿತರ ಜೊತೆ ಅಲ್ಬಾನಿಯಲ್ಲಿರುವ ಐತಿಹಾಸಿಕ ಸ್ಥಳಕ್ಕೆ ಹೋಗಿದ್ದನು. ಈ ವೇಳೆ ಸೆಲ್ಫೀ ತೆಗೆದುಕೊಳ್ಳುವಾಗ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
Advertisement
ಅಂಕಿತ್ ಪರ್ತ್ ನಲ್ಲಿ ಓದುತ್ತಿದ್ದನು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಫೋಟೋ ತೆಗೆದುಕೊಳ್ಳಲು ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಜಿಗಿಯುತ್ತಿದ್ದನು. ಆಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
Advertisement
Advertisement
ಅಂಕಿತ್ ತುಂಬಾ ಜಾಗ್ರತೆಯಿಂದ ಬಂಡೆಯ ಮೇಲೆ ನಿಂತಿದ್ದ ಒಂದು ಫೋಟೋ ತೆಗೆದುಕೊಳ್ಳುವಾಗ ಆತ ಬಂಡೆಯ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ ಎಂದು ಅಂಕಿತ್ ಸ್ನೇಹಿತನೊಬ್ಬ ತಿಳಿಸಿದ್ದಾನೆ.
Advertisement
ಅಂಕಿತ್ ಕೆಳಗೆ ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಹುಡುಕಲು ಹೆಲಿಕಾಪ್ಟರ್ ಬಳಸಲಾಗಿತ್ತು. ಇದು ಒಂದು ದೊಡ್ಡ ದುರಂತ ಎಂದು ಎಸ್‍ಐ ಡೋಮಿನಕ್ ವುಡ್ ತಿಳಿಸಿದ್ದಾರೆ.