ಫಿಟ್ನೆಸ್ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಪ್ರೇರಣೆಯಾದ ಕ್ಯಾಪ್ಟನ್ ಕೊಹ್ಲಿ

Public TV
1 Min Read
KOHLI fitness

ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್, ಫೀಲ್ಡಿಂಗ್, ನಾಯಕತ್ವದ ಮಾತ್ರವಲ್ಲದೇ ಫಿಟ್ನೆಸ್ ವಿಚಾರದಲ್ಲೂ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಅದ್ಭುತ ಫಿಟ್ನೆಸ್‍ನಿಂದ ಅಭಿಮಾನಿಗಳು ಮಾತ್ರವಲ್ಲದೇ ತಂಡದ ಇತರೇ ಯುವ ಆಟಗಾರರಿಗೂ ಕೂಡ ಕೊಹ್ಲಿ ಮಾದರಿಯಾಗಿದ್ದಾರೆ.

ಟೀಂ ಇಂಡಿಯಾದಲ್ಲಿ ಈಗಾಗಲೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಬುಮ್ರಾ ರಂತಹ ಆಟಗಾರರು ಸಿಕ್ಸ್ ಪ್ಯಾಕ್ ಸಾಧಿಸಿದ್ದಾರೆ. ಇತ್ತ ಯುವ ಆಟಗಾರ ರಿಷಬ್ ಪಂತ್, ಶಿಖರ್ ಧವನ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಇದೇ ಹಾದಿಯಲ್ಲಿದ್ದಾರೆ. ಇದಕ್ಕೆ ಪ್ರಮುಖವಾಗಿ ಕೊಹ್ಲಿರ ಫಿಟ್ನೆಸ್ ಸ್ಫೂರ್ತಿ ಎನ್ನಬಹುದು.

 

View this post on Instagram

 

Putting in the work shouldn’t be a choice, it should be a requirement to get better. #keeppushingyourself

A post shared by Virat Kohli (@virat.kohli) on

ಇತ್ತೀಚೆಗೆ ಕೊಹ್ಲಿ ತಮ್ಮ ಫಿಟ್ನೆಸ್ ಲೆವೆಲ್ ಕುರಿತ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ನಾಯತ್ವದ ಟೀಂ ಇಂಡಿಯಾ ಸದ್ಯ ಟಿ20 ಟೂರ್ನಿಯ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಹ್ಯಾಮಿಲ್ಟನ್ ನಲ್ಲಿ ಬುಧವಾರ 3ನೇ ಟಿ30 ಪಂದ್ಯ ನಡೆಯಲಿದೆ. ಈಗಾಗಲೇ ಹ್ಯಾಮಿಲ್ಟನ್‍ಗೆ ತೆರಳಿರುವ ಟೀಂ ಇಂಡಿಯಾ ಆಟಗಾರು ಮೈದಾನದಲ್ಲಿ ತರಬೇತಿಯೊಂದಿಗೆ ಜಿಮ್‍ನಲ್ಲೂ ಬೆವರಿಳಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *