LatestLeading NewsMain PostNational

ಡಾಲರ್‌ ಮುಂದೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಮುಂಬೈ: ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 51 ಪೈಸೆ ಇಳಿಕೆ ಕಂಡಿದ್ದು, ಒಂದು ಡಾಲರ್‌ ಮುಂದೆ ರೂಪಾಯಿ ಮೌಲ್ಯ 77.42 ವಿನಿಮಯವಾಗಿದೆ.

ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಏರಿಕೆ ಮಾಡಿತ್ತು. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಬಿದ್ದಿದ್ದು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

ಕಳೆದ ಶುಕ್ರವಾರ ರೂಪಾಯಿ ಮೌಲ್ಯ 55 ಪೈಸೆ ಇಳಿಕೆ ಕಂಡು 76.90ಗೆ ಕೊನೆಯಾಗಿತ್ತು. ವಿದೇಶ ಬಂಡವಾಳದ ಹೊರ ಹರಿವು, ವಿದೇಶಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.

ರಷ್ಯಾ ಉಕ್ರೇನ್‌ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿದೆ. ಸೋಮವಾರ ಮತ್ತಷ್ಟು ದರ ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ತೈಲದ ದರ 112.25 ಡಾಲರ್‌ಗೆ(8,690 ರೂ.) ಏರಿಕೆಯಾಗಿದೆ. ಇದನ್ನೂ ಓದಿ: ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

ಚೀನಾದಲ್ಲಿ ಕೊರೊನಾ ಲಾಕ್‌ಡೌನ್‌, ತೈಲ ಬೆಲೆ ಏರಿಕೆ, ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದ್ದು ಬಿಎಸ್‌ಇ ಸೆನ್ಸೆಕ್ಸ್‌ ಇಂದು 364.91 ಅಂಶ ಕುಸಿದಿದ್ದು 54,470 ರಲ್ಲಿ ಕೊನೆಯಾಗಿದೆ.

Leave a Reply

Your email address will not be published. Required fields are marked *

Back to top button