ನವದೆಹಲಿ: 2025ರ ಒಳಗೆ ಎಲ್ಲ ಡೀಸೆಲ್ ಹಾಗೂ ಬಯೋ ಇಂಧನ ರೈಲು ಇಂಜಿನ್ಗಳನ್ನು (Railway Engine) ಹಿಂಪಡೆದು ಸಂಪೂರ್ಣ ಎಲೆಕ್ಟ್ರಿಕ್ ಇಂಜಿನ್ಗಳನ್ನು (Electric Engine) ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ವಿದ್ಯುತ್ ಚಾಲಿತ ವಾಹನಗಳ (Electric Vehicles) ಮೇಲೆ ಈ ನೀತಿಯನ್ನು ಕಳೆದ ವಾರ ಜಾರಿಗೆ ತರಲಾಗಿದೆ. ಇದರೊಂದಿಗೆ ರೈಲ್ವೆಯು ಪ್ರಮುಖ ರೈಲು ನಿಲ್ದಾಣಗಳು (RailwayStations), ಕಚೇರಿ ಕಟ್ಟಡಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ನಿರ್ಮಿಸುವುದಾಗಿ ಹೇಳಿದೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್
Advertisement
2023ರೊಳಗೆ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ (Electric Vehicles) ದೇಶವಾಗಿ ಮಾಡಬೇಕೆಂಬ ಸರ್ಕಾರದ ಗುರಿಯ ಹಿನ್ನೆಲೆಯಲ್ಲಿ ರೈಲ್ವೆಯ ಈ ನೀತಿಗೆ ಮಹತ್ವ ಬಂದಿದೆ. ಇದನ್ನೂ ಓದಿ: ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್ವೈ ಹೆಸರು: ಸಿಎಂ ಬೊಮ್ಮಾಯಿ
Advertisement
Advertisement
ರೈಲ್ವೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಇಂಜಿನ್ ಅನುಷ್ಠಾನಕ್ಕೆ ಬರಲು 46 ಸಾವಿರ ಚಾರ್ಜಿಂಗ್ ಸ್ಟೇಷನ್ಗಳು ದೇಶಾದ್ಯಂತ ಬೇಕಾಗುತ್ತವೆ. ಸದ್ಯದ ಗುರಿ ಪ್ರಕಾರ 2023 ರೊಳಗೆ ಶೇ.20, 2024ರೊಳಗೆ ಶೇ.60 ಹಾಗೂ 2025ರ ಅಂತ್ಯದೊಳಗೆ ಶೇ.100ರಷ್ಟು ಎಲೆಕ್ಟ್ರಿಕ್ ಇಂಜಿನ್ ಅಳವಡಿಸುವ ಗುರಿ ಇಲಾಖೆ ಹಾಕಿಕೊಂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.