ನವದೆಹಲಿ: ಭಾರತೀಯ ರೈಲ್ವೇ ದೋಷಪೂರಿತವಾಗಿರುವ ಬಯೋ ಟಾಯ್ಲೆಟ್ ಸರಿಪಡಿಸಲು 42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಲೋಡ್ ಸಗಣಿಯನ್ನು ಖರೀದಿಸಲು ಮುಂದಾಗಿದೆ.
2014-2015-2016-2017 ಮಹಾಲೇಖಪಾಲರ(ಸಿಎಜಿ) ವರದಿ ಸಂಸತ್ತಿನಲ್ಲಿ ಮಂಡನೆಯಾಗಿದ್ದು, ಇದರಲ್ಲಿ 1,99,689 ಬಯೋ ಟಾಯ್ಲೆಟ್ ಗಳ ಪೈಕಿ 25 ಸಾವಿರ ಟಾಯ್ಲೆಟ್ ಗಳು ದೋಷಪೂರಿತವಾಗಿದೆ ಎಂದು ತಿಳಿಸಿದೆ. ಈ ದೋಷಪೂರಿತವಾಗಿರುವ ಟಾಯ್ಲೆಟ್ ಗಳ ಸರಿ ಪಡಿಸಲು 2018ರಲ್ಲಿ ರೈಲ್ವೇ ಸಚಿವಾಲಯ ಖಾಸಗಿ ಅವರಿಂದ ಪ್ರತಿ ಲೀಟರ್ ಗೆ 19 ರೂ. ನೀಡಿ ಸಗಣಿ ಖರೀದಿಸಲು ಮುಂದಾಗಿದೆ.
Advertisement
Advertisement
ಏನಿದು ಬಯೋ ಟಾಯ್ಲೆಟ್?
ಶೌಚ ಹಳಿಗೆ ಬೀಳುವುದನ್ನು ತಪ್ಪಿಸಲು ಟಾಯ್ಲೆಟ್ ಕೆಳಗಡೆ ಬಯೋ ಟಾಯ್ಲೆಟ್ ಟ್ಯಾಂಕ್ ಗಳನ್ನು ಜೋಡಣೆ ಮಾಡಲಾಗಿದೆ. ಈ ಟ್ಯಾಂಕ್‍ಗಳು ಆರು ವಿಭಾಗಗಳನ್ನು ಒಳಗೊಂಡಿದ್ದು, ವಿವಿಧ ಹಂತದ ಸಂಸ್ಕರಣೆ ಬಳಿಕ ಶೌಚ ಜಲ ಹಾಗೂ ಅನಿಲವಾಗಿ ಪರಿವರ್ತನೆಯಾಗುತ್ತದೆ.
Advertisement
ಸಗಣಿ ಯಾಕೆ?
ಬಯೋ ಟಾಯ್ಲೆಟ್ ಟ್ಯಾಂಕ್ ನಲ್ಲಿ ಮನುಷ್ಯನ ಮಲವನ್ನು ಬ್ಯಾಕ್ಟೀರಿಯಗಳು ಸಂಸ್ಕರಿಸುತ್ತವೆ. ದೋಷಪೂರಿತಗೊಂಡಿರುವ ಬಯೋ ಟಾಯ್ಲೆಟ್ ಸರಿ ಪಡಿಸಲು ಬ್ಯಾಕ್ಟೀರಿಯಾಗಳ ಅಗತ್ಯವಿದೆ. ಹೀಗಾಗಿ ಈ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಲು ದನದ ಸಗಣಿಯನ್ನು ಖರೀದಿಸಲು ರೈಲ್ವೇ ಮುಂದಾಗಿದೆ.
Advertisement
ಬಯೋ ಟಾಯ್ಲೆಟ್ ಎಷ್ಟಿದೆ?
ಪ್ರಸ್ತುತ ಒಟ್ಟು 44.8% ರೈಲಿನಲ್ಲಿ ಬಯೋ ಟಾಯ್ಲೆಟ್ ಅಳವಡಿಸಲಾಗಿದೆ. ಈ 2018ರಲ್ಲಿ ಎಲ್ಲ ರೈಲಿನಲ್ಲಿ ಬಯೋ ಟಾಯ್ಲೆಟ್ ಅಳವಡಿಸಬೇಕೆಂಬ ಗುರಿಯನ್ನು ಸಚಿವಾಲಯ ಹಾಕಿಕೊಂಡಿದೆ.
ಯಾಕೆ ಹಾಳಾಗುತ್ತೆ?
ಬಯೋ ಟಾಯ್ಲೆಟ್ ಯಶಸ್ವಿಯಾಗಬೇಕಾದರೆ ಪ್ರಯಾಣಿಕರ ಸಹಕಾರ ಅಗತ್ಯ. ಬಾಟಲಿ, ತಿಂಡಿ, ಪ್ಲಾಸ್ಟಿಕ್, ನ್ಯಾಪ್ ಕಿನ್, ಗುಟ್ಕಾ ಪಾಕೆಟ್, ಪ್ಲಾಸ್ಟಿಕ್ ಗಳನ್ನು ಶೌಚಾಲಯಕ್ಕೆ ಎಸೆಯದಂತೆ ಇಲಾಖೆ ಮನವಿ ಮಾಡಿದ್ದರೂ ಕೆಲ ಮಂದಿ ಎಸೆದ ಕಾರಣ ಟ್ಯಾಂಕ್ ನಲ್ಲಿ ಸರಿಯಾಗಿ ಸಂಸ್ಕರಣೆಯಾಗದೇ ಹಾಳಾಗುತ್ತದೆ.
ವರದಿಯಲ್ಲಿರುವ ಪ್ರಮುಖ ಅಂಶಗಳು:
ಶೌಚಾಲಯ ಕೆಟ್ಟು ಹೋಗಿದೆ ಎಂದು 1,02,792 ದೂರುಗಳು ಬಂದಿದ್ದು, ಒಂದು ಶೌಚಾಲಯ ವರ್ಷದಲ್ಲಿ ನಾಲ್ಕು ಬಾರಿ ಹಾಳಾಗುತ್ತದೆ. 2015-16ರಲ್ಲಿ ಶೌಚಾಲಯ ಹಾಳಾಗಿದೆ ಎಂದು 61,088 ದೂರು ದಾಖಲಾಗಿದ್ದವು. ನೈರುತ್ಯ ರೈಲ್ವೆ ವಲಯದಲ್ಲಿ ಬರುವ ಬೆಂಗಳೂರು ಕೋಚ್ ಡಿಪೊವೊಂದಲ್ಲೇ ಇಂತಹ ಶೇ 33.89ರಷ್ಟು ಪ್ರಕರಣಗಳನ್ನು ವರದಿಯಾಗಿದೆ. ಈ ಕೇಂದ್ರವು ಒಟ್ಟು ಜೈವಿಕ ಶೌಚಾಲಯಗಳ ಪೈಕಿ ಶೇ 1.6ರಷ್ಟನ್ನು ಮಾತ್ರ ನಿರ್ವಹಿಸುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!
ಸಚಿವಾಲಯದ ಹೇಳೋದು ಏನು?
ಪ್ರಯಾಣಿಕರು ಈ ಸೇವೆಯನ್ನು ದುರುಪಯೋಗ ಪಡಿಸಿಕೊಂಡಿದ್ದರಿಂದ ಈ ಸಮಸ್ಯೆಯಾಗಿದೆ. ಶೌಚಾಲಯದಲ್ಲಿ ಇರಿಸಿರುವ ಸ್ಟೀಲ್ ಕಸದ ಡಬ್ಬಿಗಳು ಕಳುವಾಗುತ್ತಿದೆ. ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಈಗ ಶೌಚಾಲಯಗಳು ಹಾಳಾಗುವ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!