ಲಕ್ನೋ: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೆಕೆಆರ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಲಕ್ನೋ ತಂಡ ಪ್ಲೆ ಆಫ್‌ಗೆ ಹಾರಿದೆ. ಕೆಕೆಆರ್ ಸೋಲಿನೊಂದಿಗೆ 2023ರ ಐಪಿಎಲ್ ಆವೃತ್ತಿಗೆ ವಿದಾಯ ಹೇಳಿದೆ.
14ರ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು +0284 ರನ್ ರೇಟ್‌ನೊಂದಿಗೆ 17 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದೆ.
Advertisement
Advertisement
ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ 1 ರನ್ ನಿಂದ ವಿರೋಚಿತ ಸೋಲನುಭವಿಸಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಕೆಕೆಆರ್ ಉತ್ತಮ ಆರಂಭ ಪಡೆದರೂ ಬಳಿಕ ಕೆಕೆಆರ್ ಬೌಲಿಂಗ್ ದಾಳಿಗೆ ತತ್ತರಿಸಿತು. ಮೊದಲ ವಿಕೆಟ್ ಪತನಕ್ಕೆ ಜೇಸನ್ ರಾಯ್, ವೆಂಕಟೇಶ್ ಅಯ್ಯರ್ ಜೋಡಿ 5.5 ಓವರ್‌ಗಳಲ್ಲಿ 61 ರನ್ ಕಲೆಹಾಕಿತ್ತು. ಅಯ್ಯರ್ 24 ರನ್, ಜೇಸನ್ ರಾಯ್ 28 ಎಸೆತಗಳಲ್ಲಿ 45 ರನ್ ಗಳಿಸಿದರು. ಬಳಿಕ ನಿತೀಶ್ ರಾಣಾ, ರಹ್ಮದ್ದುಲ್ಲಾ ಗುರ್ಭಜ್ 10 ರನ್, ರಸ್ಸೆಲ್ 7 ರನ್ ಗಳಿಸಿ ಕೈಚೆಲ್ಲಿದರು. ಕೊನೆಯಲ್ಲಿ ರಿಂಕು ಸಿಂಗ್ ಹೋರಾಟ ಅರ್ಧ ಶತಕದ ಹೋರಾಟ ನಡೆಸಿದರೂ ತಂಡ ವಿರೋಚಿತ ಸೋಲಿಗೆ ಗುರಿಯಾಯಿತು. ರಿಂಕು ಸಿಂಗ್ 33 ಎಸೆತಗಳಲ್ಲಿ ಭರ್ಜರಿ 67 ರನ್ (6 ಬೌಂಡರಿ, 4 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಕ್ವಿಂಟನ್ ಡಿ ಕಾಕ್ 28 ರನ್ (27 ಎಸೆತ, 2 ಸಿಕ್ಸರ್), ಪ್ರೇರಕ್ ಮಂಕದ್ 26 ರನ್ (20 ಎಸೆತ, 5 ಬೌಂಡರಿ) ಗಳಿದರೂ, ನಿಧಾನಗತಿಯ ಬ್ಯಾಟಿಂಗ್‌ನಿಂದ ತಂಡ ಕಡಿಮೆ ರನ್ ದಾಖಲಿಸಿತ್ತು. ಮೊದಲ 10 ಓವರ್‌ಗಳಲ್ಲಿ 73 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಿಕೋಲಸ್ ಪೂರನ್ ಭರ್ಜರಿ ಅರ್ಧಶತಕದ ಬ್ಯಾಟಿಂಗ್‌ನಿಂದ ತಂಡ 170ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಲಕ್ನೋ ತಂಡದ ಪರ ಡಿಕಾಕ್ 28 ರನ್, ಮಂಕದ್ 26 ರನ್, ಆಯುಷ್ ಬದೋನಿ 25 ರನ್ ಗಳಿಸಿದರೆ ನಿಕೋಲಸ್ ಪೂರನ್ 58 ರನ್ (30 ಎಸೆತ, 5 ಸಿಕ್ಸರ್, 4 ಬೌಂಡರಿ) ಚಚ್ಚಿದರು.
ಕೆಕೆಆರ್ ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಸುನೀಲ್ ನರೇನ್ ತಲಾ 2 ವಿಕೆಟ್ ಕಿತ್ತರೆ, ಪರ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.