ಮುಂಬೈ: ಕ್ಯಾಮರೂನ್ ಗ್ರೀನ್ (Cameron Green) ಸ್ಪೋಟಕ ಶತಕ, ರೋಹಿತ್ ಶರ್ಮಾ (Rohit Sharma) ಅರ್ಧಶತಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ ತಂಡವು ಕೊನೆಯ ಲೀಗ್ ಪಂದ್ಯದಲ್ಲಿ ಸೋತು 2023 ಐಪಿಎಲ್ ಆವೃತ್ತಿಗೆ ವಿದಾಯ ಹೇಳಿದೆ.
Advertisement
ಅಂದುಕೊಂಡಂತೆ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಓವರ್‌ಗಳಲ್ಲಿ ರನ್ ಕಲೆಹಾಕದಿದ್ದರೂ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಐಪಿಎಲ್ ಲೀಗ್ ಹಂತದಲ್ಲಿ ಆರ್‌ಸಿಬಿ (RCB) ಹಾಗೂ ಗುಜರಾತ್ ಟೈಟಾನ್ಸ್ (GT) ನಡುವೆ ಇನ್ನೊಂದು ಪಂದ್ಯ ಬಾಕಿಯಿದ್ದು, ಆರ್‌ಸಿಬಿ ಗೆದ್ದರಷ್ಟೇ ಪ್ಲೇ ಆಫ್ ತಲುಪಲಿದೆ. 14 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ -0.044 ರನ್‌ರೇಟ್‌ನೊಂದಿಗೆ 16 ಅಂಕ ಪಡೆದು 4ನೇ ಸ್ಥಾನಕ್ಕೇರಿದೆ. ಆದ್ರೆ ಆರ್‌ಸಿಬಿ 7 ಪಂದ್ಯ ಗೆದ್ದು +0.180 ರನ್‌ರೇಟ್ ನೊಂದಿಗೆ 14 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಒಂದು ವೇಳೆ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ಉತ್ತಮ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ ಆರ್‌ಸಿಬಿ ಖಚಿತವಾಗಿ ಪ್ಲೇ ಆಫ್ ತಲುಪಲಿದೆ. ಪ್ರಬಲ ಪೈಪೋಟಿ ನೀಡಿದರೂ ಆರ್‌ಸಿಬಿಗೆ ಪ್ಲೇ ಆಫ್ ತಲುಪುವ ಅವಕಾಶವಿದೆ.
Advertisement
Advertisement
ಮುಂಬೈ ತವರು ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ 18 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ
Advertisement
ಚೇಸಿಂಗ್ ಆರಂಭಿಸಿದ ಮುಂಬೈ ಉತ್ತಮ ಆರಂಭ ಪಡೆಯದಿದ್ದರೂ 2ನೇ ವಿಕೆಟ್ ಅಂತ್ಯಕ್ಕೆ ಕ್ಯಾಮರೂನ್ ಗ್ರೀನ್ ಹಾಗೂ ನಾಯಕ ರೋಹಿತ್ ಶರ್ಮಾ ಜೋಡಿ 1.3.1 ಓವರ್‌ಗಳಲ್ಲಿ 148 ರನ್ ಸಿಡಿಸಿತ್ತು. ಇವರಿಬ್ಬರ ಹೊಡಿ-ಬಡಿ ಆಟಕ್ಕೆ ಹೈದರಾಬಾದ್ ತಂಡದ ಬೌಲರ್‌ಗಳು ಸುಸ್ತಾಗಿದ್ದರು. ಕ್ಯಾಮರೂನ್ ಗ್ರೀನ್ 47 ಎಸೆತಗಳಲ್ಲಿ 100 ರನ್ (8 ಸಿಕ್ಸ್, 8 ಬೌಂಡರಿ), ರೋಹಿತ್ ಶರ್ಮಾ 56 ರನ್ (37 ಎಸೆತ, 8 ಬೌಂಡರಿ, 1 ಸಿಕ್ಸ್), ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 25 ರನ್ ಹಾಗೂ ಇಶಾನ್ ಕಿಶನ್ 14 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ತಂಡ ಉತ್ತಮ ಆರಂಬ ಪಡೆದುಕೊಂಡಿತು. ಮೊದಲ ವಿಕೆಟ್ ಪತನಕ್ಕೆ ವಿವ್ರಿಂತ್ ಶರ್ಮಾ ಹಾಗೂ ಮಯಾಂಕ್ ಅಗರ್ವಲ್ ಜೋಡಿ 13.5 ಓವರ್‌ಗಳಲ್ಲಿ 140 ರನ್ ಸಿಡಿಸಿತ್ತು. ಬಳಿಕ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಹೋದಂತೆ ರನ್ ಹೊಳೆಯೂ ಹರಿಯಿತು. ಅಂತಿಮವಾಗಿ ಹೈದರಾಬಾದ್ 200 ರನ್ ಕಲೆಹಾಕಿತು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?
ತಂಡದ ಪರ ವಿವ್ರಿಂತ್ ಶರ್ಮಾ 69 ರನ್ (47 ಎಸೆತ, 2 ಸಿಕ್ಸ್, 9 ಬೌಂಡರಿ), ಮಯಾಂಕ್ ಅಗರ್ವಾಲ್ 83 ರನ್ (46 ಎಸೆತ, 8 ಬೌಂಡರಿ, 4 ಸಿಕ್ಸರ್), ಹೆನ್ರಿಚ್ ಕ್ಲಾಸೆನ್ 18 ರನ್, ಏಡನ್ ಮಾರ್ಕ್ರಮ್ 13 ರನ್ ಬಾರಿಸಿದರು.
ಮುಂಬೈ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆಕಾಶ್ ಮಧ್ವಲ್, 4 ಓವರ್‌ಗಳಲ್ಲಿ 39 ರನ್ ನೀಡಿ 4 ವಿಕೆಟ್ ಕಿತ್ತರೆ, ಕ್ರಿಸ್ ಜೋರ್ಡಾನ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.