ಅಲ್ಬೇನಿಯಾ: ವಿಮಾನ ಅಪಘಾತಗೊಂಡು (Plane Crash) ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿದ್ದು, ಮಗಳು ಗಂಭೀರ ಗಾಯಗೊಂಡಿರುವ ಘಟನೆ ನ್ಯೂಯಾರ್ಕ್‌ನಲ್ಲಿ (New York) ನಡೆದಿದೆ.
ಭಾರತೀಯ ಮೂಲದ ರೋಮಾ ಗುಪ್ತ (63) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಅವರ ಮಗಳು ರೀವಾ ಗುಪ್ತ (33) ಹಾಗೂ 23 ವರ್ಷದ ಪೈಲೆಟ್ ಮಾರ್ಗದರ್ಶಕ (Pilot Instructor) ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ರೋಮಾ ಗುಪ್ತ ಹಾಗೂ ರೀವಾ ಗುಪ್ತ ಪ್ರಯಾಣಿಸುತ್ತಿದ್ದ ಸಂದರ್ಭ ವಿಮಾನದ ಕಾಕ್‌ಪಿಟ್‌ನಲ್ಲಿ (Cockpit) ಹಠಾತ್ ಹೊಗೆ ಕಾಣಿಸಿಕೊಂಡು ಅಪಘಾತಕ್ಕೀಡಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ: ಆರೋಗ್ಯದ ಮಾಹಿತಿ ಹಂಚಿಕೊಂಡ ಬಿಗ್ ಬಿ
ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ (Republic Airport) ಹಿಂತಿರುಗುತ್ತಿದ್ದ ವೇಳೆ ನಾಲ್ಕು ಆಸನಗಳನ್ನು ಒಳಗೊಂಡಿದ್ದ ಸಿಂಗಲ್ ಇಂಜಿನ್ ಪೈಪರ್ ಚೆರೋಕಿ (Piper Cherokee) ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ರೋಮಾ ಗುಪ್ತ ಸಾವನ್ನಪ್ಪಿದ್ದಾರೆ. ಅವರ ಮಗಳು ರೀವಾ ಗುಪ್ತ ಹಾಗೂ ಪೈಲೆಟ್ ಮಾರ್ಗದರ್ಶಕನಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ರೀವಾ ಗುಪ್ತ ಸ್ಟೋನಿ ಬ್ರೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೀವಾ ಅವರು ಮೌಂಟ್ ಸಿನಾಯ್ ಸಿಸ್ಟಮ್‌ನಲ್ಲಿ ವೈದ್ಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ವಿಮಾನ ಮಾರ್ಗದರ್ಶಕನ ಸ್ಥಿತಿಯೂ ಗಂಭೀರವಾಗಿದೆ. ಇದನ್ನೂ ಓದಿ: ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ – ಪ್ರಯಾಣಿಕ ಅರೆಸ್ಟ್
ಅಪಘಾತದ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ರಾಷ್ಟ್ರೀಯ ಸುರಕ್ಷತಾ ಮಂಡಳಿಯು (National Transportation Safety Board) ತನಿಖೆ ಮುಂದುವರಿಸಲಿದೆ. ಈ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal Aviation Administration) ಕೂಡಾ ತನಿಖೆ ನಡೆಸುತ್ತಿದೆ. ಪರಿಶೀಲನೆ ನಡೆಸಲು ಫೆಡರಲ್ ತನಿಖಾಧಿಕಾರಿಗಳು ಕ್ರ್ಯಾಶ್ ಸೈಟ್‌ಗೆ ಮರಳಲಿದ್ದಾರೆ. ಅಲ್ಲದೇ ಅವಶೇಷಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿಂದಿದೆ ಕಾರ್ಮಿಕ ಚಳುವಳಿಯ ಇತಿಹಾಸ