ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ

Public TV
1 Min Read
Chirag Antil Canada

ಒಟ್ಟಾವಾ: ಭಾರತ ಮೂಲದ ವಿದ್ಯಾರ್ಥಿಯನ್ನು (Indian Origin Student) ಕಾರಿನೊಳಗೆ ಗುಂಡಿಕ್ಕಿ (Shootout) ಹತ್ಯೆಗೈದ ಘಟನೆ ಕೆನಾಡಾದ (Canada) ದಕ್ಷಿಣ ವ್ಯಾಂಕೋವರ್‌ನಲ್ಲಿ ನಡೆದಿದೆ.

ಚಿರಾಗ್ ಆಂಟಿಲ್ (24) ಹತ್ಯೆಯಾದ ವಿದ್ಯಾರ್ಥಿ. ಗುಂಡಿನ ಸದ್ದು ಕೇಳುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಚಿರಾಗ್ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ತನಿಖೆ ಮುಂದುವರಿದಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

crime scene

ಮೃತ ಚಿರಾಗ್ ಸಹೋದರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ಫೋನಿನಲ್ಲಿ ಮಾತನಾಡಬೇಕಾದರೆ ಖುಷಿಯಾಗಿಯೇ ಇದ್ದ. ಬಳಿಕ ಎಲ್ಲೋ ಹೋಗಬೇಕೆಂದು ತನ್ನ ಆಡಿ ಕಾರನ್ನು ಹೊರಗೆ ತೆಗೆದ ಸಂದರ್ಭ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮುಖ್ಯಸ್ಥ ವರುಣ್ ಚೌಧರಿ ಅವರು ಎಕ್ಸ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಟ್ಯಾಗ್ ಮಾಡಿ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲೇ ವಿದ್ಯಾರ್ಥಿ ಜೊತೆ ರಾಸಲೀಲೆ – ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

ಚಿರಾಗ್ ಮೃತದೇಹವನ್ನು ಭಾರತಕ್ಕೆ ತರುವ ಸಲುವಾಗಿ ಕುಟುಂಬಸ್ಥರು ಕ್ರೌಡ್ ಫಂಡಿಂಗ್ ಪ್ಲ್ಯಾಟ್‌ಫಾರ್ಮ್‌ನ ‘ಗೋ ಫಂಡ್ ಮೀ’ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಚಿರಾಗ್ ಆಂಟಿಲ್ ಸೆಪ್ಟೆಂಬರ್ 2022ರಲ್ಲಿ ವ್ಯಾಂಕೋವರ್‌ಗೆ ಬಂದಿದ್ದ. ಮೃತ ಚಿರಾಗ್ ಕೆನಡಾ ವೆಸ್ಟ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ ಇತ್ತೀಚೆಗೆ ಕೆಲಸದ ಪರವಾನಗಿಯನ್ನು ಪಡೆದಿದ್ದ. ಇದನ್ನೂ ಓದಿ: ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

Share This Article