ವಾಷಿಂಗ್ಟನ್: ಅಮೆರಿಕದ ವಸತಿ ನಿಲಯವೊಂದರಲ್ಲಿ 20 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಆತನ ಕೊರಿಯನ್ ರೂಮ್‍ಮೇಟ್ ಹತ್ಯೆಗೈದಿದ್ದಾನೆ.
ಇಂಡಿಯಾನಾಪೊಲಿಸ್‍ನ (Indianapolis) ವರುಣ್ ಮನೀಶ್ ಛೇಡಾ, ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ (Purdue University) ಓದುತ್ತಿದ್ದರು. ಆದರೆ ಬುಧವಾರ ಕ್ಯಾಂಪಸ್‍ನ ಅಂಚಿನಲ್ಲಿರುವ ಮೆಕ್‍ಕಟ್ಚಿಯಾನ್ ಹಾಲ್‍ನಲ್ಲಿ (McCutcheon Hall) ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಈ ಘಟನೆ ಕುರಿತಂತೆ ಕೊರಿಯಾದ ಜೂನಿಯರ್ ಸೈಬರ್ ಸೆಕ್ಯುರಿಟಿ ಮೇಜರ್ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಯೊಬ್ಬರು, ಪೊಲೀಸರಿಗೆ ಬುಧವಾರ ಮಧ್ಯಾಹ್ನ 12:45ರ ಸುಮಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪಡ್ರ್ಯೂ ವಿಶ್ವವಿದ್ಯಾಲಯದ ಪೊಲೀಸ್ ಮುಖ್ಯಸ್ಥ (Purdue University Police Chief) ಲೆಸ್ಲಿ ವೈಟೆ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಪ್ರವಾಸದಲ್ಲಿದ್ರೂ ಯಾವ ನಾಯಕರಿಗೂ ಭೇಟಿಗೆ ಅವಕಾಶ ಕೊಡದ ಸೋನಿಯಾ ಗಾಂಧಿ!
Advertisement
ಮೆಕ್‍ಕಟ್ಚಿಯಾನ್ ಹಾಲ್‍ನ ಮೊದಲ ಮಹಡಿಯ ಕೊಠಡಿಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ವರುಣ್ ಮನೀಶ್ ಛೇಡಾ, ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ಡೇಟಾ ಸೈನ್ಸ್ ಓದುತ್ತಿದ್ದರು. ಶವದ ಮೇಲೆ ಚುಚ್ಚಿರುವ ಗಾಯಗಳಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿದ್ಯಾರ್ಥಿಯನ್ನು ಹತ್ಯೆಗೈದಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್ ಆಗಿದ್ದ ಭಾರತ ಮೂಲದ ಒಂದೇ ಕುಟುಂಬ ನಾಲ್ವರು ಶವವಾಗಿ ಪತ್ತೆ
Advertisement
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ವರುಣ್ ಮನೀಶ್ ಛೇಡಾ ಅವರ ಬಾಲ್ಯದ ಸ್ನೇಹಿತ ಅರುಣಾಭ್ ಸಿನ್ಹಾ ಅವರು, ಮಂಗಳವಾರ ರಾತ್ರಿ ಛೇಡಾ ಆನ್‍ಲೈನ್‍ನಲ್ಲಿ ಆಟವಾಡುತ್ತಿದ್ದರು ಮತ್ತು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಾಲ್‍ನಲ್ಲಿ ಕಿರುಚಾಡುತ್ತಿರುವ ಶಬ್ಧ ಕೇಳಿಸಿತು. ಅಲ್ಲದೇ ಆ ರಾತ್ರಿ ಆತ ಸ್ನೇಹಿತರೊಂದಿಗೆ ಆನ್‍ಲೈನ್‍ನಲ್ಲಿ ಆಟವನ್ನು ಕೂಡ ಆಡಲಿಲ್ಲ. ಏನಾಯಿತು ಎಂಬುವುದು ಸಹ ಗೊತ್ತಾಗಲಿಲ್ಲ. ಆದರೆ ಬೆಳಗ್ಗೆ ವರುಣ್ ಮನೀಶ್ ಛೇಡಾ ಸಾವಿನ ಸುದ್ದಿ ತಿಳಿದುಬಂದಿತು ಎಂದು ಹೇಳಿದ್ದಾರೆ.