ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾತ್ರಿ ರಾಜಾ ಚಾರಿ 6 ತಿಂಗಳು ಬಾಹ್ಯಾಕಾಶ ಯಾನದ ಬಳಿಕ ಭೂಮಿಗೆ ಮರಳಲು ಸಿದ್ದರಾಗಿದ್ದಾರೆ.
ರಾಜಾ ಚಾರಿ ನಾಸಾ ಸ್ಪೇಸ್ ಎಕ್ಸ್ ಕ್ರ್ಯೂ ಮಿಷನ್ ಅಡಿಯಲ್ಲಿ ಇತರ ಮೂವರು ಗಗನಯಾತ್ರಿಗಳೊಂದಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಯಾಣ ಪ್ರಾರಂಭಿಸಿದ್ದರು. ಇದೀಗ ಶೀಘ್ರವೇ ಈ ತಂಡ ಭೂಮಿಗೆ ಮರಳಲಿದೆ. ಇದನ್ನೂ ಓದಿ: ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ
Advertisement
Advertisement
ಭಾರತ ಮೂಲದ ರಾಜಾ ಚಾರಿಯೊಂದಿಗೆ ಟಾಮ್ ಮಾರ್ಷ್ಬರ್ನ್, ಕೈಲಾ ಬ್ಯಾರನ್ ಹಾಗೂ ಯುರೋಪ್ ಸ್ಪೇಸ್ ಏಜೆನ್ಸಿಯ(ಇಎಸ್‌ಎ) ಗಗನಯಾತ್ರಿ ಮಥಿಯಾಸ್ ಮೌರೆರ್ 2021ರ ನವೆಂಬರ್‌ನಲ್ಲಿ ಬಾಹ್ಯಾಕಾಶ ಪ್ರಯಾಣ ಪ್ರಾರಂಭಿಸಿದರು. ಇದೀಗ ಕ್ರ್ಯೂ-3 ತಂಡ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಯಶಸ್ವೀ ವೈಜ್ಞಾನಿಕ ಕಾರ್ಯಾಚರಣೆ ಬಳಿಕ ಈ ತಿಂಗಳ ಕೊನೆಯಲ್ಲಿ ಭೂಮಿಗೆ ಮರಳಲಿದ್ದಾರೆ.
Advertisement
1st spacewalk didn’t disappoint & worked w/ @NASA classmate Kayla Barron installing new solar panel structure on @iss. Cameras don’t do it justice, but do give sense of how hard it can be to concentrate when there’s so much to look at. pic.twitter.com/USQPIFOiVv
— Raja Chari (@Astro_Raja) March 21, 2022
Advertisement
ರಾಜಾ ಚಾರಿ ಯಾರು?
ಭಾರತದ ತೆಲಂಗಾಣದಲ್ಲಿ ಜನಿಸಿದ ರಾಜಾ ಚಾರಿ ಪ್ರಸ್ತುತ ನಾಸಾ ಸ್ಪೇಸ್‌ಎಕ್ಸ್ ಕ್ರ‍್ಯೂ-3 ಮಿಷನ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2017ರಲ್ಲಿ ನಾಸಾ ರಾಜಾ ಚಾರಿಯನ್ನು ಗಗನಯಾತ್ರಿ ಅಭ್ಯರ್ಥಿ ವರ್ಗಕ್ಕೆ ಸೇರಿಸಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್?
ಇವರು 1999ರಲ್ಲಿ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಿಂದ ಆಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರಿಂಗ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ಸ್ ಹಾಗೂ ಆಸ್ಟ್ರೋನಾಟಿಕಲ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕದ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ಪದವಿಯನ್ನೂ ಪೂರೈಸಿದ್ದಾರೆ.
ಇದೀಗ ಯಶಸ್ವೀ ಬಾಹ್ಯಾಕಾಶ ಕಾರ್ಯಾಚರಣೆಗಳ ಬಳಿಕ ಕ್ರ್ಯೂ-3 ತಂಡ ಫ್ಲೋರಿಡಾಗೆ ಬಂದಿಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.