ನ್ಯೂಯಾರ್ಕ್: ಮನೆಯ ಸಮೀಪಿರುವ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ಎಸ್‍ಯುವಿ ವಾಹನದಲ್ಲಿ ಕುಳಿತಿದ್ದಾಗ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದೆ.
ಸತ್ನಮ್ ಸಿಂಗ್ (31) ಮೃತ ವ್ಯಕ್ತಿ. ಕ್ವೀನ್ಸ್‌ನ ಸೌತ್ ಓಝೋನ್ ಪಾರ್ಕ್ ವಿಭಾಗದಲ್ಲಿ ಸತ್ನಮ್ ಸಿಂಗ್ ತನ್ನ ಸ್ನೇಹಿತನ ಜೀಪ್‍ನಲ್ಲಿ ಕುಳಿತಿದ್ದ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯೊಬ್ಬ ನಡೆದುಕೊಂಡು ಬಂದು ಸತ್ನಮ್ ಸಿಂಗ್ ಅವರ ಕುತ್ತಿಗೆ ಹಾಗೂ ಎದೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ತಿಳಿಸಿದೆ.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಎದೆಗೆ ಮತ್ತು ಕುತ್ತಿಗೆ ಭಾಗಕ್ಕೆ ಗುಂಡೇಟು ತಲುಪಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೆಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ವಿವಾದಿತ ಪಠ್ಯಗಳ ಮಾರ್ಪಾಡಿಗೆ ಸರ್ಕಾರದ ಆದೇಶ – ಕೈ ಬಿಟ್ಟ ಯಾವ ಅಂಶಗಳು ಸೇರ್ಪಡೆಯಾಗಿವೆ?
ಗುಂಡಿನ ದಾಳಿ ನಡೆಸಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಂದೂಕುಧಾರಿಯೂ ಸತ್ನಮ್ ಸಿಂಗ್‍ನ ಸ್ನೇಹಿತನನ್ನು ಕೊಲ್ಲಲು ಬಯಸಿದ್ದನೋ ಅಥವಾ ಸತ್ನಮ್ ಸಿಂಗ್‍ನನ್ನೇ ಕೊಲ್ಲಲು ಗುರಿಯಾಗಿಸಿಕೊಂಡಿದ್ದನೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ನ್ಯೂಯಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಆತನ ವಾಹನದಲ್ಲೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಗರದಲ್ಲಿ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಬ್ಬ ಭಾರತೀಯನ ಹತ್ಯೆ ಆಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಶೂಟೌಟ್- ಭಾರತದ ಟೆಕ್ಕಿ ಹತ್ಯೆ