ವಾಷಿಂಗ್ಟನ್: ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಆತನ ವಾಹನದಲ್ಲೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬೊಲ್ಟಿಮೋರ್ ನಗರದಲ್ಲಿ ನಡೆದಿದೆ.
ನಕ್ಕಾ ಸಾಯಿ ಚರಣ್ (26) ಮೃತ ವ್ಯಕ್ತಿ. ಕಳೆದ ಎರಡು ವರ್ಷಗಳಿಂದ ಚರಣ್ ಬಾಲ್ಟಿಮೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ ಹತ್ಯೆ ಮಾಡಿದ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ.
Advertisement
Advertisement
ತನ್ನ ಕಾರಿನಲ್ಲಿ ಚರಣ್ ಗಾಯಗೊಂಡು ಮಲಗಿದ್ದರು. ಈ ಹಿನ್ನೆಲೆಯಲ್ಲಿ ಯುವಕನನ್ನು ಆರ್.ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್‌ಗೆ ರವಾನಿಸಲಾಯಿತು. ಆದರೆ ಚರಣ್ ತಲೆಗೆ ಗುಂಡೆಟು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಕೇಶ್ ಜುಂಜುನ್‌ವಾಲ ಬೆಂಬಲಿತ ಆಕಾಶ ಏರ್ ವಿಮಾನ ಲ್ಯಾಂಡ್ – ಶೀಘ್ರವೇ ಸೇವೆ ಆರಂಭ
Advertisement
Advertisement
ಭಾರತದಲ್ಲಿನ ಅವರ ಕುಟುಂಬದ ಪ್ರಕಾರ, ನಿವೃತ್ತ ಶಾಲಾ ಶಿಕ್ಷಕರ ಮಗನಾದ ಚರಣ್, 4 ವರ್ಷಗಳ ಹಿಂದೆ ತನ್ನ ಸ್ನಾತಕೋತ್ತರ ಪದವಿಗಾಗಿ ಯುನೈಟೆಡ್ ಸ್ಟೇಟ್‌ಗೆ ತೆರಳಿದ್ದರು. ನಂತರ ಬಾಲ್ಟಿಮೋರ್ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದರು. ಅವರ ಸಹೋದರಿ ಕೂಡ ಅಮೆರಿಕದಲ್ಲಿ ಓದುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನನ್ನನ್ನು ಕಿಡ್ನಾಪ್ ಮಾಡಿದ್ರು, ಸೂರತ್‌ನಿಂದ ತಪ್ಪಿಸಿಕೊಂಡು ಬಂದೆ: ಶಿವಸೇನೆ ಶಾಸಕನ ಸ್ಫೋಟಕ ಹೇಳಿಕೆ