ಸಿಂಗಾಪುರ: 25 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2020ರಲ್ಲಿ ಭಾರತೀಯ ಮೂಲದ ಸೂರ್ಯ ಕೃಷ್ಣನ್ ಸಿಂಗಾಪುರದಲ್ಲಿ ವಾಸಿಸುತ್ತಿದ್ದ. ಈತನ ಮನೆಯಲ್ಲಿ ಮ್ಯಾನ್ಮಾರ್ ಮೂಲದ ಮಹಿಳೆ ಕೆಲಸ ಮಾಡುತ್ತಿದ್ದಳು. ಒಂದು ದಿನ ಆಕೆಯನ್ನು ಕೃಷ್ಣನ್ ಹೀನಾಯವಾಗಿ ಥಳಿಸಿದ್ದನು. ಪರಿಣಾಮ ಆಕೆ ಪೊಲೀಸರಿಗೆ, ಕೃಷ್ಣನ್ ಬೇಕೆಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ನನಗೆ ತಲೆ, ಭುಜ ಮತ್ತು ತೊಡೆಯಲ್ಲಿ ಗಾಯಗಳಾಗಿವೆ ಎಂದು ದೂರು ನೀಡಿದ್ದಳು. ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!
Advertisement
Advertisement
ಸಂತ್ರಸ್ತೆ 27 ವರ್ಷದ ಮ್ಯಾನ್ಮಾರ್ ಪ್ರಜೆಯಾಗಿದ್ದು, ಕೃಷ್ಣನ್ ಅವರ ಸಹೋದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಕೃಷ್ಣನ್ ತನ್ನ ಸಹೋದರಿ ಮತ್ತು ಪೋಷಕರೊಂದಿಗೆ ಇಲ್ಲಿನ ಹೌಗಾಂಗ್ ಹೌಸಿಂಗ್ ಎಸ್ಟೇಟ್‍ನಲ್ಲಿರುವ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.
Advertisement
ನಡೆದಿದ್ದು ಏನು?
ಮೇ 29 2020 ರ ರಾತ್ರಿ, ಕೃಷ್ಣನ್ ಅವರ ಕುಟುಂಬವು ಅಪಾಟ್ರ್ಮೆಂಟ್ ನಲ್ಲಿ ಅವರ ತಂದೆಯ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿತ್ತು. ಹುಟ್ಟುಹಬ್ಬ ಪ್ರಾರಂಭವಾಗುವ ಮೊದಲು, ಕೃಷ್ಣನ್ ಮದ್ಯವನ್ನ ಸೇವಿಸಿ ಅಮಲಿನಲ್ಲಿದ್ದ. ಈ ವೇಳೆ ಕೃಷ್ಣನ್ ತಾಯಿ, ಮನೆಗೆಲಸದವಳಿಗೆ ಜೆಲ್ಲಿ ಮಾಡುವಂತೆ ಹೇಳುತ್ತಾಳೆ. ಆಗ ಆಕೆಯೂ ಅಡುಗೆ ಮನೆಗೆ ಹೋಗಿ ಮಾಡುತ್ತಿರುತ್ತಾಳೆ. ಈ ವೇಳೆ ಬಂದ ಕೃಷ್ಣನ್ ನನಗೂ ಜೆಲ್ಲಿ ಕೊಡು ಎಂದು ಕೇಳಿದ್ದಾನೆ. ಆಗ ಆಕೆ ನೀವು ತುಂಬಾ ತಿಂದ್ದೀರಾ, ಈಗ ಬೇಡ ಎಂದು ಹೇಳುತ್ತಾಳೆ. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!
Advertisement
ಕೃಷ್ಣನ್ ತಾಯಿ ಆಕೆಯನ್ನು ಗದರುತ್ತಾನೆ. ಮನೆಗೆಲಸದವಳ ಕೆನ್ನೆಗೆ ಎರಡು-ಮೂರು ಬಾರಿ ಹೊಡೆಯುತ್ತಾನೆ. ಆಕೆ ಕೆಳಗೆ ಬೀಳುತ್ತಾಳೆ. ಮನೆಯವರೆಲ್ಲ ತಡೆದರೂ ಕೃಷ್ಣನ್ ಮನೆಗೆಲಸದವಳ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಆಕೆ ಆಸ್ಪತ್ರೆ ಸೇರಿದ್ದು, ಗಂಭೀರ ಗಾಯವಾಗಿದೆ. ಪರಿಣಾಮ ಆಕೆ ಪೊಲೀಸರಿಗೆ ದೂರನ್ನು ಕೊಟ್ಟಿದ್ದು, ಕೃಷ್ಣನ್ ನನ್ನು ಬಂಧಿಸಿ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.