ಅಬುಧಾಬಿ: ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಭಾರತೀಯ ಮೂಲದ ಉದ್ಯಮಿಗಳಾದ ಗುಪ್ತಾ ಸಹೋದರರನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಬಂಧಿಸಲಾಗಿದೆ.
ಯುಎಇನಲ್ಲಿ ಕಾನೂನು ಜಾರಿ ಅಧಿಕಾರಿಗಳು ಗುಪ್ತಾ ಕುಟುಂಬದ ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತಿಳಿಸಿದೆ.
ಗುಪ್ತಾ ಸಹೋದರರು 24 ವರ್ಷಗಳ ಹಿಂದೆ ವ್ಯಾಪಾರ ಅವಕಾಶಗಳನ್ನು ಹುಡುಕಿಕೊಂಡು ದಕ್ಷಿಣ ಆಫ್ರಿಕಾಗೆ ಹೋಗಿದ್ದರು. ಅವರ ವ್ಯಾಪಾರ ನಿಧಾನವಾಗಿ ಹರಡಿ, ದಕ್ಷಿಣ ಆಫ್ರಿಕಾದ 10 ಶ್ರೀಮಂತ ವ್ಯಾಪಾರಿ ಕುಟುಂಬಗಳಲ್ಲಿ ಒಂದಾಯಿತು. ಇದನ್ನೂ ಓದಿ: ಬೆಂಗಳೂರಲ್ಲಿ ನೆಲೆಸಿದ್ದ ಉಗ್ರ, ಹಿಂದೂಗಳ ಹತ್ಯೆ ಮಾಡುತ್ತಿದ್ದ ಸಂಘಟನೆಯ ಕಮಾಂಡೋ ಆಗಿದ್ದ
ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಅವರನ್ನು ರಾಜಕೀಯ ಹಾಗೂ ವ್ಯಾಪಾರ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಜುಮಾ ಅವರು ಅಧಿಕಾರದಲ್ಲಿದ್ದಾಗ 2009 ರಿಂದ 2018 ರವರೆಗೆ ಗುಪ್ತಾ ಸಹೋದರರು ದಿ ನ್ಯೂ ಏಜ್(ಟಿಎನ್‌ಎ) ಪತ್ರಿಕೆಗಾಗಿ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ
ಉತ್ತರ ಪ್ರದೇಶದ ಸಹರಾನ್‌ಪುರ ಮೂಲದ ಮೂವರು ಗುಪ್ತಾ ಸಹೋದರರಾದ ಅಜಯ್, ಅತುಲ್ ಹಾಗೂ ರಾಜೇಶ್ ಟಿಎನ್‌ಎ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸದ್ಯ ಪತ್ರಿಕೆ ಮುಚ್ಚಲಾಗಿದೆ. ಬಳಿಕ ಮೂರೂ ಸಹೋದರರು ದುಬೈನಲ್ಲಿ ನೆಲೆಸಿದ್ದು, ಅವರ ವಿರುದ್ಧ ದಕ್ಷಿಣ ಆಫ್ರಿಕಾ ಕ್ರಿಮಿಲ್ ಆರೋಪಗಳನ್ನು ಹೊರಿಸಿ, ಹಸ್ತಾಂತರಿಸುವಂತೆ ಕೇಳಿಕೊಂಡಿದೆ.