ಲಂಡನ್: ಭಾರತೀಯ ಮೂಲದ ವೈದ್ಯೆಯೊಬ್ಬರು (Indian Origin Doctor) ಯುಕೆನಲ್ಲಿರುವ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ (Royal College Of Physicians) 123ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೌದು. ಭಾರತೀಯ ಮೂಲದ ಡಾ.ಮುಮ್ತಾಜ್ ಪಟೇಲ್ (Mumtaz Patel) ಈಗ ವಿಶ್ವದಾದ್ಯಂತ 40,000 ಸದಸ್ಯರನ್ನು ಪ್ರತಿನಿಧಿಸುವ ಯುಕೆ ವೈದ್ಯಕೀಯ ವೃತ್ತಿಪರ ಸದಸ್ಯತ್ವ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಮುಮ್ತಾಜ್ ಪಟೇಲ್ ಅವರು ವಾಯುವ್ಯ ಇಂಗ್ಲೆಂಡ್‌ನ ಲಂಕಾಶೈರ್‌ನಲ್ಲಿ ಭಾರತೀಯ ವಲಸೆ ಪೋಷಕರಿಗೆ ಜನಿಸಿದರು, ಸದ್ಯ ಅವರು ಮ್ಯಾಂಚೆಸ್ಟರ್‌ನಲ್ಲಿ ಮೂತ್ರಪಿಂಡ ತಜ್ಞರಾಗಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ
ಅಧ್ಯಕ್ಷೀಯ ಸ್ಪರ್ಧೆಯ ಮತದಾನ ಸೋಮವಾರ ಮುಕ್ತಾಯಗೊಂಡಿದ್ದು, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಅವರ ಕರ್ತವ್ಯ ದಿನಾಂಕವನ್ನು ಇನ್ನೂ ನಿಗಧಿಮಾಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್?
ಇನ್ನೂ ಈ ಸಂತಸವನ್ನು ಹಂಚಿಕೊಂಡಿರುವ ಮುಮ್ತಾಜ್, ಅಧ್ಯಕ್ಷೆಯಾಗಿ ಆರ್‌ಸಿಪಿ ಸಂಸ್ಥೆಯನ್ನು ಉಮ್ಮವಾಗಿ ಮುನ್ನಡೆಸುತ್ತೇನೆ. ಆಸ್ಪತ್ರೆಗಳಿಗೆ ಬರುವವರಿಗೆ ಸಾಧ್ಯವಾದಷ್ಟು ಉತ್ತಮ ಆರೋಗ್ಯ ಸೇವೆ ನೀಡಲು ವೃತ್ತಿಜೀವನದ ಪ್ರತೀ ಹಂತದಲ್ಲೂ ನಮ್ಮ ಸದಸ್ಯರನ್ನು ಬೆಂಬಲಿಸುತ್ತೇನೆ. ನನ್ನ 20 ವರ್ಷಗಳ ಅನುಭವವನ್ನು ಈ ಸಂಸ್ಥೆಯ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ನುಡಿದ್ದಾರೆ.
ಮೂತ್ರಪಿಂಡ (ಕಿಡ್ನಿ) ತಜ್ಞರಾಗಿರುವ ಡಾ.ಮುಮ್ತಾಜ್ ಪಟೇಲ್, ಆರ್‌ಸಿಪಿ ಹಿರಿಯ ಸೆನ್ಸಾರ್ ಮತ್ತು ಶಿಕ್ಷಣ ಮತ್ತು ತರಬೇತಿಗಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, 2024ರ ಜೂನ್‌ರಿಂದ ಅದೇ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಕಗೊಂಡರು. ಇದನ್ನೂ ಓದಿ: ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಗೆ ಸುಂಕ ವಿನಾಯ್ತಿ – ಆ್ಯಪಲ್ ಸೇರಿ ಹಲವು ಕಂಪನಿಗಳು ಸೇಫ್