ಒಟ್ಟೋವಾ: ಕೆನಡಾದಲ್ಲಿ (Canada) ರೋಗಿ ಜೊತೆ ಸೆಕ್ಸ್ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತುಗೊಳಿಸಲಾಗಿದೆ.
ವೈದ್ಯೆ ಸುಮನ್ ಖುಲ್ಬೆ, ಪುರುಷ ರೋಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ, ಇನ್ನಿಬ್ಬರೊಂದಿಗೆ ವೃತ್ತಿಪರವಲ್ಲದ ರೀತಿ ವರ್ತಿಸಿದ್ದಾರೆ. ಹೀಗಾಗಿ, ವೈದ್ಯೆ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್
ವೈದ್ಯೆಯ ನಡವಳಿಕೆಯನ್ನು ತನಿಖಾ ಸಮಿತಿ ಪರಿಶೀಲಿಸಿದೆ. ಖುಲ್ಬೆ ತನ್ನ ರೋಗಿಗಳನ್ನು ರೋಗಿಗಳಂತೆ ಕಾಣಲಿಲ್ಲ. ತನ್ನ ಸ್ನೇಹಿತರು, ಪಾರ್ಟ್ನರ್ ರೀತಿ ನಡೆಸಿಕೊಂಡಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಒಂಟಾರಿಯೊದ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಕಾಲೇಜು, ವೈದ್ಯರು ಮತ್ತು ರೋಗಿಯ ನಡುವಿನ ಲೈಂಗಿಕ ಸಂಪರ್ಕವನ್ನು ಅಪರಾಧ ಎಂದೇ ಪರಿಗಣಿಸುತ್ತದೆ. ತಪ್ಪಿತಸ್ಥರ ಮೇಲೆ ಯಾವುದೇ ಸಹಿಷ್ಣುತೆ ಇರುವುದಿಲ್ಲ. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್