ಕಾರವಾರ ಬಂದರಿನಲ್ಲಿ ಮಿಂಚಿದ ವಿಕ್ರಮಾದಿತ್ಯ- ಕೊರೊನಾ ವಾರಿಯರ್ಸ್‍ಗೆ ಸೆಲ್ಯೂಟ್

Public TV
1 Min Read
INS Vikramaditya 2 1000x600 copy

– ಕೇರಳ, ಮುಂಬೈ ಬಂದರುಗಳಲ್ಲೂ ನಮನ

ನವದೆಹಲಿ: ದೇಶಾದ್ಯಂತ ಭಾರತೀಯ ಮೂರು ಪಡೆಯ ಯೋಧರಿಂದ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಾಗಿದ್ದು, ವಾಯು ಸೇನೆಯಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿಗೈದರೆ, ಅತ್ತ ಇಂಡಿಯನ್ ನೇವಿ ಹಡಗುಗಳು ದೀಪಾಲಂಕಾರದಿಂದ ಕಂಗೊಳಿಸುವ ಮೂಲಕ ಗೌರವ ಸಲ್ಲಿಸಿದವು. ಕಾರವಾರದ ನೌಕಾ ನೆಲೆಯಲ್ಲಿ ವಿಕ್ರಮಾದಿತ್ಯ ಸಹ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

INS Vikramaditya 1 1000x591 copy

ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ಐಎನ್‍ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಬಣ್ಣದ ಲೈಟುಗಳನ್ನು ಅಲಂಕಾರ ಮಾಡಿ ಪಟಾಕಿ ರಾಕೆಟ್ ಮೂಲಕ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ಕಾರವಾರದ ಅರಗಾದ ಕದಂಬ ನೌಕಾ ನೆಲೆಯಲ್ಲಿ ದೇಶದ ಅತಿದೊಡ್ಡ ಯುದ್ಧ ನೌಕೆ ವಿಕ್ರಮಾದಿತ್ಯ ಹಡಗಿನಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟಡುತ್ತಿರುವ ಕೊರೊನಾ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರಿಗೆ ಗೌರವ ಸಲ್ಲಿಸಲಾಯಿತು.

ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರಿಗೆ ಗೌರವ ಸಲ್ಲಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಕಾರ್ಯವನ್ನು ಹಮ್ಮಿಕೊಂಡಿತ್ತು. ಬೆಳಗ್ಗೆ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್‍ಗಳು ಪುಷ್ಪವೃಷ್ಠಿಗೈದರೆ, ಸಂಜೆ ಇಂಡಿಯನ್ ನೇವಿ ಹಡಗುಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು.

ದೇಶದಲ್ಲೆಡೆ ಅಭಿನಂದನೆ ಸಲ್ಲಿಸಲಾಗಿದ್ದು, ಭಾರತೀಯ ಮೂರು ಪಡೆಯ ಯೋಧರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೊರೊನಾ ವಾರಿಯರ್ಸ್ ಮೇಲೆ ಪುಷ್ಪವೃಷ್ಠಿ ಮಾಡಿದರು. ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆ, ಬೆಂಗಳೂರಿನಲ್ಲಿ ಕಮಾಂಡ್, ವಿಕ್ಟೋರಿಯಾ ಆಸ್ಪತ್ರೆ, ದೆಹಲಿಯ ಏಮ್ಸ್, ರಾಜಸ್ಥಾನದ ಸಾವಾಯಿ ಮಾನ್‍ಸಿಂಗ್ ಆಸ್ಪತ್ರೆ, ಚಂಡೀಗಢ, ಗುವಾಹತಿ, ಪಾಟ್ನಾ, ಲೇಹ್‍ಗಳಲ್ಲಿ ಆಸ್ಪತೆಗಳ ಮೇಲೆ ಪುಷ್ಪವೃಷ್ಠಿ ಮಾಡಲಾಯಿತು.

ಕಾರವಾರ, ಕೇರಳದ ಕೊಚ್ಚಿ ಬಂದರು, ಮುಂಬೈ ಹಾಗೂ ಇತರೆಡೆಗಳಲ್ಲಿ ಹಡಗುಗಳನ್ನು ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡುವ ಮೂಲಕ ವಾರಿಯರ್ಸ್‍ಗೆ ಮನಮ ಸಲ್ಲಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *