ಜೈಪುರ: ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗಿಂತ ಭಾರತದಲ್ಲಿರುವ ಮುಸ್ಲಿಮರು ತುಂಬಾ ಸುರಕ್ಷಿತರಾಗಿದ್ದಾರೆ ಎನ್ನುವ ಮೂಲಕ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Bilawal Bhutto) ಅವರಿಗೆ ಅಜ್ಮಿರ್ ದರ್ಗಾ ಧರ್ಮಗುರು ಹಜರತ್ ಸೈಯದ್ ನಾಸಿರುದ್ದೀನ್ ಚಿಸ್ತಿ (Hazrat Syed Naseeruddin Chishty) ತಿರುಗೇಟು ನೀಡಿದ್ದಾರೆ.
ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ (Narendra Modi) ಪಾಕ್ ವಿದೇಶಾಂಗ ಸಚಿವ ಹೇಳಿಕೆ ನೀಡಿದ್ದರು. ಅದಕ್ಕೆ ಭಾರತಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಭುಟ್ಟೋ ಹೇಳಿಕೆ ಖಂಡಿಸಿ ಮುಸ್ಲಿಂ ಧರ್ಮಗುರು ಮಾತನಾಡಿದ್ದಾರೆ. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆ
Advertisement
Advertisement
ನಮ್ಮ ಪ್ರಧಾನಿ ಮತ್ತು ನಮ್ಮ ತಾಯ್ನಾಡಿನ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವರು ಬಳಸುತ್ತಿರುವ ಆಕ್ಷೇಪಾರ್ಹ ಪದವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
Advertisement
ಭಾರತೀಯ ಮುಸ್ಲಿಮರು ಪಾಕಿಸ್ತಾನಿ ಮುಸ್ಲಿಮರಿಗಿಂತ ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟುಕೊಳ್ಳಬೇಕು. ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾಯಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಅಮೆರಿಕದ ಪಡೆ ಹತ್ಯೆ ಮಾಡಿದೆ ಎಂಬುದನ್ನು ಬಿಲಾವಲ್ ಭುಟ್ಟೋ ಮರೆತಿದ್ದಾರೆ ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ
Advertisement
ಪಾಕಿಸ್ತಾನದ ವಿದೇಶಾಂಗ ಸಚಿವರು ಎಂದಿಗೂ ಶ್ರೇಷ್ಠ ದೇಶ ಭಾರತವನ್ನು ತಮ್ಮ ಅಸ್ಥಿರ ದೇಶದೊಂದಿಗೆ ಹೋಲಿಸಬಾರದು. ಭಾರತದ ಸಂವಿಧಾನವು ಎಲ್ಲರಿಗೂ ಧರ್ಮದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ಹೇಳಿದ್ದಾರೆ.