ವಾಷಿಂಗ್ಟನ್: ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹತ್ಯೆಗೆ ತಾನೇ ಸಂಚು ರೂಪಿಸಿದ್ದಾಗಿ ಭಾರತೀಯ ಮೂಲದ ವ್ಯಕ್ತಿ ಅಮೆರಿಕದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
54 ವರ್ಷದ ನಿಖಿಲ್ ಗುಪ್ತಾ (Nikhil Gupta) ಕೊಲೆಗೆ ಸಂಚು, ಬಾಡಿಗೆದಾರರು ಹಾಗೂ ಹಣ ವರ್ಗಾವಣೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ನಿಖಿಲ್ ಗುಪ್ತನನ್ನ ದೋಷಿ ಎಂದು ಪರಿಗಣಿಸಿದ್ದು, ಮೇ 29 ರಂದು ಶಿಕ್ಷೆ ವಿಧಿಸುವುದಾಗಿ ಮ್ಯಾನ್‌ಹ್ಯಾಟನ್‌ನಲ್ಲಿರುವ ಫೆಡರಲ್ ಮ್ಯಾಜಿಸ್ಟ್ರೇಟ್ ಕೋರ್ಟ್ (federal magistrate Court) ಹೇಳಿದೆ. ಸದ್ಯದ ಮಾಹಿತಿ ಪ್ರಕಾರ, ನಿಖಿಲ್ ಗುಪ್ತಾ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯೆಯಿದೆ ಎನ್ನಲಾಗ್ತಿದೆ. ಇದನ್ನೂ ಓದಿ: ಉಗ್ರ ಪನ್ನು ಹತ್ಯೆಗೆ ಸಂಚು – ಭಾರತದ ಮಾಜಿ ʻರಾʼ ಅಧಿಕಾರಿ ಮೋಸ್ಟ್ ವಾಂಟೆಡ್ ಎಂದು ಘೋಷಿಸಿದ FBI

ಯುಎಸ್ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಗುಪ್ತಾ ಭಾರತೀಯ ಸರ್ಕಾರಿ ಉದ್ಯೋಗಿಯ ನಿರ್ದೇಶನದ ಮೇರೆಗೆ ಪನ್ನುನ್ ಹತ್ಯೆಗೆ ಸಂಚು ನಡೆದಿತ್ತು. ಹಾಗಾಗಿ ಆತನನ್ನ ಬಲಿಪಶು ಎಂದು ಕೋರ್ಟ್ ಹೇಳಿದೆ. ಪನ್ನುನ್ ಸಿಖ್ ಪ್ರತ್ಯೇಕತಾವಾದಿ ಚಳವಳಿಯ ಪ್ರಮುಖ ವ್ಯಕ್ತಿ ಹಾಗೂ ಭಾರತದಲ್ಲಿ ಭಯೋತ್ಪಾದಕ ಎಂಬ ಹಣೆಪಟ್ಟಿ ಇದೆ. ಇದನ್ನೂ ಓದಿ: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್
2023 ರಲ್ಲಿ ನಿಖಿಲ್ ಗುಪ್ತಾ ರನ್ನ ವಿಕಾಸ್ ಯಾದವ್ ಎಂಬ ಅಧಿಕಾರಿ ನೇಮಕ ಮಾಡಿಕೊಂಡಿದ್ದರು. ವಿಕಾಸ್ ನಿರ್ದೇಶನದ ಮೇರೆಗೆ ಅಮೆರಿಕದಲ್ಲಿ ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. 1,00,000 ಡಾಲರ್ ಸುಪಾರಿಗೆ ಮಾತುಕತೆ ನಡೆಸಿ, 15,000 ಡಾಲರ್‌ನಷ್ಟು ಹಣವನ್ನ ಅಡ್ವಾನ್ಸ್ ಕೂಡ ಕೊಡಲಾಗಿತ್ತು. ಬಳಿಕ ಪನ್ನು ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಶೂಟರ್‌ಗೆ ನೀಡಲಾಗಿತ್ತು. ಇನ್ನೇನು ಹತ್ಯೆಗೆ ಮುಂದಾಗಬೇಕು ಅನ್ನುವಾಗಲೇ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಈ ಪ್ರಕರಣವನ್ನ ಭೇದಿಸಿತು.

ಏನಿದು ಪ್ರಕರಣ?
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನೆಲೆಸಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ 2023 ರಲ್ಲಿ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಭಾರತ ಸರ್ಕಾರದ ನಿವೃತ್ತ ʻರಾʼ ಉದ್ಯೋಗಿ ವಿಕಾಸ್‌ನನ್ನ ಸಿಸಿ-1 (ಸಹ ಸಂಚುಕೋರ) ಆರೋಪಿ ಎಂದು ಹೆಸರಿಸಲಾಗಿದೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆ ಸಂಚು | ಅಮೆರಿಕ ನ್ಯಾಯಾಲಯದ ಸಮನ್ಸ್‌ಗೆ ಅನಗತ್ಯ ಆರೋಪ ಎಂದ ಭಾರತ
18 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿತ್ತು. ನ್ಯೂಯಾರ್ಕ್‌ನಲ್ಲಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಸಹ ನಮೂದಿಸಲಾಗಿತ್ತು. ಇದು ಆರೋಪಿ ನಿಖಿಲ್ ಗುಪ್ತಾ ಮತ್ತು ವಿಕಾಸ್ ಯಾದವ್ ಅವರ ಪರವಾಗಿ ಕೊಲೆಗಾರನಿಗೆ ಹತ್ಯೆ ಮಾಡಲು ವ್ಯಕ್ತಿಯೊಬ್ಬರು ಪಾವತಿಸುತ್ತಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದರು.

ಈ ಪ್ರಕರಣದಲ್ಲಿ ಭಾರತದ ನಿವೃತ್ತ ʻರಾʼ ಅಧಿಕಾರಿ ವಿಕಾಸ್ ಯಾದವ್‌ನನ್ನ (39) ಮೋಸ್ಟ್ ವಾಂಟೆಡ್ (Most Wanted) ಎಂದು ಹೆಸರಿಸಿದೆ. ಅಲ್ಲದೇ ವಿಕಾಸ್ ಯಾದವ್‌ನ 3 ಚಿತ್ರಗಳನ್ನ ಮೋಸ್ಟ್ ವಾಂಟೆಡ್ ಎನ್ನುವ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದು, ಇದೇ ತಿಂಗಳ ಅಕ್ಟೋಬರ್ 10 ರಂದು ಬಂಧನದ ವಾರಂಟ್ ಜಾರಿಗೊಳಿಸಿದೆ.

