ಲಂಡನ್: ಬ್ರಿಟನ್‌ನಲ್ಲಿರುವ ತನ್ನ ಕುಟುಂಬದ ಮನೆಯಲ್ಲಿ ಸಾನ್ ಆಫ್ ಶಾಟ್‌ಗನ್ ಬಚ್ಚಿಟ್ಟಿದ್ದಕ್ಕಾಗಿ ಭಾರತೀಯ ಮೂಲದ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಬಂದೂಕು ಬಚ್ಚಿಟ್ಟಿದ್ದ ವ್ಯಕ್ತಿ ಪವನ್‌ದೀಪ್ ಸಂಧು (21) ಮನೆಯ ಡ್ರಾಯರ್‌ನಲ್ಲಿ ನಿಷೇಧಿತ ಬಂದೂಕನ್ನು ಬಚ್ಚಿಟ್ಟಿದ್ದ. ಪೊಲೀಸರು ಪರಿಶೀಲನೆ ನಡೆಸಿ ಬಂದೂಕನ್ನ ವಶಕ್ಕೆ ಪಡೆದಿದ್ದಾರೆ. ಈ ಆರೋಪದ ಮೇಲೆ ಪವನ್‌ಗೆ ಲಂಡನ್‌ನ ಸ್ನೇರ್ಸ್ಬ್ರೂಕ್ ಕ್ರೌನ್ ಕೋರ್ಟ್ ಶಿಕ್ಷೆ ವಿಧಿಸಿದೆ.
Advertisement
ಆರೋಪಿ ಬಂದೂಕಿನೊಂದಿಗೆ ಚಾಕುವನ್ನೂ ಹೊಂದಿದ್ದರಿಂದ 6 ವರ್ಷಗಳೊಂದಿಗೆ 3 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಲಾಗಿದೆ. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ
Advertisement
Advertisement
ಲಂಡನ್‌ನಲ್ಲಿ ಸಾರ್ವಜನಿಕರು ಬಂದೂಕು ಹಾಗೂ ಮಾರಕಾಸ್ತ್ರ ಹೊಂದುವುದನ್ನು ನಿಷೇಧಿಸಿದೆ. ಇವುಗಳು ಇದ್ದರೆ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಂತಹ ಮಾರಕಾಸ್ತ್ರಗಳನ್ನು ಜನರಿಂದ ವಶಪಡಿಸಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
Advertisement
ಆರೋಪಿ ಪವನ್‌ನನ್ನು ಜೂನ್ 30 ರಂದೇ ಪೊಲೀಸರು ಬಂಧಿಸಿದ್ದರು. ನಂತರ ಆತನ ಮನೆಯಲ್ಲಿ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಆಗಸ್ಟ್ 13ರಂದು ಸ್ನೇರ್ಸ್ಬ್ರೂಕ್ ಕ್ರೌನ್ ಕೋರ್ಟ್ನಲ್ಲಿ ವಿಚಾರಣೆ ನಡೆಸಿದ್ದಾಗ ಪವನ್ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪವನ್‌ಗೆ ಸೋಮವಾರ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಸಿಕ್ತು ಗುಡ್ ನ್ಯೂಸ್ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ