ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

Public TV
2 Min Read
Indian Man US Airport

ವಾಷಿಂಗ್ಟನ್‌: ಭಾರತೀಯ ವಿದ್ಯಾರ್ಥಿ (Indian Student) ಕೈಗೆ ಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ (America) ಗಡೀಪಾರು ಮಾಡಿರುವ ಘಟನೆ ನಡೆದಿದೆ.

ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗಡೀಪಾರು ಮಾಡುವ ಮೊದಲು ಅಧಿಕಾರಿಗಳು ಕೈಕೋಳ ಹಾಕಿ ನೆಲಕ್ಕೆ ಒತ್ತುವ ವೀಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಭಾರತ-ಪಾಕ್‌ ಯುದ್ಧ; ಪಾಕಿಸ್ತಾನಕ್ಕೇ ಹೆಚ್ಚು ಬೆಂಬಲ ನೀಡಿತ್ತು ಅಮೆರಿಕ – ಇತಿಹಾಸ ಹೇಳೋದೇನು?

ಸಾಕ್ಷಿ ಮತ್ತು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಎಂಬವರು ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ಅಧಿಕಾರಿಗಳು ವಿದ್ಯಾರ್ಥಿಯನ್ನು ಅಪರಾಧಿಯಂತೆ ನಡೆಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.

ಈ ಮನಕಲಕುವ ದೃಶ್ಯಾವಳಿಯಲ್ಲಿ ಅಮೆರಿಕದ ಪೊಲೀಸರು ವಿದ್ಯಾರ್ಥಿಯನ್ನು ನೆಲಕ್ಕೆ ಒತ್ತುತ್ತಿರುವುದು ಕಂಡುಬಂದಿದೆ. ನಾಲ್ವರು ಅಧಿಕಾರಿಗಳು ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ಮೊಣಕಾಲುಗಳನ್ನು ವಿದ್ಯಾರ್ಥಿ ಬೆನ್ನಿನ ಮೇಲೆ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಹಾಕಿದ್ದಾರೆ. ಇದನ್ನೂ ಓದಿ: ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಿ ಆತನನ್ನು ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಆತ ಕನಸುಗಳನ್ನು ಹೊತ್ತು ಬಂದಿದ್ದ. ಒಬ್ಬ ಅನಿವಾಸಿ ಭಾರತೀಯನಾಗಿ, ನಾನು ಅಸಹಾಯಕನಾದೆ. ಇದು ಮಾನವ ದುರಂತ ಎಂದು ಜೈನ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ವಿಷಯದ ಬಗ್ಗೆ ತನಿಖೆ ಮಾಡಲು ಮತ್ತು ವಿದ್ಯಾರ್ಥಿಗೆ ಸಹಾಯ ಮಾಡಲು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಜೈನ್‌ ಮನವಿ ಮಡಿಕೊಂಡಿದ್ದಾರೆ.

Share This Article