ದುಬೈ: 12 ವರ್ಷದ ಬಾಲಕಿಯೊಬ್ಬರು 85 ಭಾಷೆಗಳಲ್ಲಿ ಹಾಡುಗಳನ್ನು ಗಾಯನ ಮಾಡುವ ಮೂಲಕ ಗಿನ್ನಿಸ್ ಬುಕ್ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದಾಳೆ.
ದುಬೈನ ಇಂಡಿಯನ್ ಹೈಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಖೇತಾ ಸತೀಶ್ ಎಂಬ ಬಾಲಕಿ ಈ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದು, ಈಗಾಗಲೇ ಈಕೆ 80 ವಿವಿಧ ಭಾಷೆಗಳಲ್ಲಿ ಹಾಡುವ ಸಾಮಥ್ರ್ಯ ಹೊಂದಿದ್ದಾಳೆ. ಡಿಸೆಂಬರ್ 29 ರಂದು ನಡೆಯುವ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡಲು ಸಿದ್ಧತೆ ನಡೆಸಿದ್ದಾಳೆ.
Advertisement
Advertisement
ಈ ಕಾರ್ಯಕ್ರಮದ ವೇಳೆಗೆ ಇನ್ನು 5 ಭಾಷೆಗಳ ಹಾಡುಗಳನ್ನು ಕಲಿತು ಹೊಸ ದಾಖಲೆ ಬರೆಯಲು ತಯಾರಿ ನಡೆಸಲಾಗುತ್ತಿದೆ. ಮೂಲತಃ ಕೇರಳದಿಂದ ಬಂದಿರುವ ಈಕೆ, ದೇಶದ ಪ್ರಮುಖ ಭಾಷೆಗಳಾದ ಹಿಂದಿ, ಮಲಯಾಳಂ, ತಮಿಳು ಭಾಷಗಳ ಹಾಡುಗಳನ್ನು ಹಾಡುತ್ತಾಳೆ.
Advertisement
ಈ ಕುರಿತು ಮಾತನಾಡಿರುವ ಸುಖೇತಾ, `ನಾನು ಒಂದು ವರ್ಷ ಹಿಂದೆ ವಿದೇಶಿ ಭಾಷೆ ಹಾಡುಗಳನ್ನು ಕಲಿಯಲು ಆರಂಭಿಸಿದೆ. ನನ್ನ ಮೊದಲ ವಿದೇಶಿ ಭಾಷೆ ಹಾಡು ಜಪಾನಿಸ್. ನಮ್ಮ ತಂದೆಯವರ ಜಪಾನಿ ಸ್ನೇಹಿತರಿಂದ ಕೇವಲ 2 ಗಂಟೆ ಅವಧಿಯಲ್ಲಿ ಹಾಡನ್ನು ಕಲಿತೆ. ಇನ್ನು ಪ್ರೆಂಚ್, ಜರ್ಮನ್, ಹಂಗೇರಿಯನ್ ಭಾಷೆಗಳು ಕಲಿಯಲು ಹೆಚ್ಚು ಶ್ರಮ ವಾಹಿಸಬೇಕಾಯಿತು ಎಂದು ಹೇಳಿದ್ದಾಳೆ.
Advertisement
ಪ್ರಸ್ತುತ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅತೀ ಹೆಚ್ಚು ಭಾಷೆಗಳಲ್ಲಿ ಗಾಯನ ಮಾಡಿರುವ ದಾಖಲೆ ಆಂಧ್ರಪ್ರದೇಶ ಕೆಸಿರಾಜು ಶ್ರೀನಿವಾಸ್ ಎಂಬವರ ಹೆಸರಿನಲ್ಲಿದ್ದು, ಇವರು 2008 ರಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ಭಾಷೆಗಳಲ್ಲಿ ಹಾಡನ್ನು ಹಾಡುವ ಮಾಡುವ ದಾಖಲೆ ನಿರ್ಮಿಸಿದ್ದರು.