ದುಬೈ: ಏಷ್ಯಾಕಪ್ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದ್ದು, ಪಂದ್ಯದ ವೇಳೆ ಪಾಕಿಸ್ತಾನ ಮಾಜಿ ನಾಯಕ ಶೋಯಿಬ್ ಮಲಿಕ್ರನ್ನು ಟೀಂ ಇಂಡಿಯಾ ಅಭಿಮಾನಿಗಳು ‘ಜಿಜು’ ಎಂದು ಕರೆದು ಕಾಲೆಳೆದಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಶೋಯಿಬ್ ಮಲಿಕ್ ಲಾಗ್ ಆನ್ ಬೌಂಡರಿ ಬಳಿ ಫೀಲ್ಡಿಂಗ್ ನಡೆಸುತ್ತಿದ್ದರು. ಇದೇ ವೇಳೆ ಅಭಿಮಾನಿಗಳು ಜಿಜು, ಜಿಜು ಎಂದು ಕರೆದಿದ್ದಾರೆ. ಅಭಿಮಾನಿಗಳು ಹಲವು ಬಾರಿ ಕರೆಯುತ್ತಿದಂತೆ ಹಿಂದೆ ತಿರುಗಿ ನೋಡಿದ ಮಲಿಕ್ ನಕ್ಕು ಸುಮ್ಮನಾಗಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
https://twitter.com/Kishni_loya/status/1043207466052476928?
Advertisement
ಮಲಿಕ್ ಭಾರತದ ಸಾನಿಯಾ ಮಿರ್ಜಾರನ್ನು ಮದುವೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಮಲಿಕ್ರನ್ನು ಜಿಜು ಎಂದು ಕರೆದಿದ್ದಾರೆ. ಅಂದಹಾಗೇ ಉರ್ದುವಿನ ಜಿಜು ಪದವು ಸಹೋದರಿಯ ಗಂಡ ಎಂಬ ಅರ್ಥವನ್ನು ನೀಡುತ್ತದೆ. ಸದ್ಯ ಮಲಿಕ್-ಸಾನಿಯಾ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ.
Advertisement
Ok.. That was nice.. #ShoaibMalik
"Jeeju".. ???? pic.twitter.com/5eZw2GQY7L
— SM Avtaar of an Introvert (@Lady_nishaaa) September 23, 2018
Advertisement
ಅಂದಹಾಗೇ ಪಾಕಿಸ್ತಾನ ಈ ಪಂದ್ಯದಲ್ಲಿ ಮುಖಭಂಗ ಉಂಟಾದರೂ ಏಷ್ಯಾಕಪ್ ಟೂರ್ನಿಯಲ್ಲಿ ಮಲಿಕ್ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಭಾನುವಾರದ ಪಂದ್ಯದಲ್ಲೂ 90 ಎಸೆತಗಳಲ್ಲಿ 78 ರನ್ ಹಾಗೂ ಗ್ರೂಪ್ ಪಂದ್ಯದಲ್ಲಿ 43 ರನ್ ಸಿಡಿಸಿ ಮಲಿಕ್ ಮಿಂಚಿದ್ದರು.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಮುಂದಿನ ಹಂತದಲ್ಲಿ ಟೀಂ ಇಂಡಿಯಾ ಸೆ.25 ರಂದು ಆಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಉಳಿದಂತೆ ಸೆ.28 ರಂದು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಇದು ಸಾಧ್ಯವಾಗಬೇಕಾದರೆ ಬುಧವಾರ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಪಡೆಯಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv