LatestLeading NewsMain PostNational

ಕೋವಿಡ್‌ನ ನಷ್ಟವನ್ನು ನೀಗಿಸಲು ಭಾರತಕ್ಕೆ 15 ವರ್ಷ ಬೇಕು: ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2021-22ರ ಕರೆನ್ಸಿ ಹಾಗೂ ಹಣಕಾಸು(ಆರ್‌ಸಿಎಫ್) ವರದಿಯನ್ನು ಬಿಡುಗಡೆ ಮಾಡಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟವನ್ನು ತುಂಬಲು ಭಾರತೀಯ ಆರ್ಥಿಕತೆಗೆ 15 ವರ್ಷ ಬೇಕು ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಕೋವಿಡ್ ಪರಿಣಾಮದಿಂದ ಭಾರತದ ಆರ್ಥಿಕತೆಯಲ್ಲಿ ಉಂಟಾದ ಹೊಡೆತದ ಚಿತ್ರಣವನ್ನು ತೋರಿಸಿದೆ. ಭಾರತ ಬೇಡಿಕೆ, ಪೂರೈಕೆ, ಸಂಸ್ಥೆಗಳು, ಮಾರುಕಟ್ಟೆ, ಸ್ಥೂಲ ಆರ್ಥಿಕ ಸ್ಥಿರತೆ ಹಾಗೂ ನೀತಿ ಸಮನ್ವಯ, ಉತ್ಪಾದನೆ ಹಾಗೂ ತಾಂತ್ರಿಕ ಪ್ರಗತಿ, ರಚನಾತ್ಮಕ ಬದಲಾವಣೆ ಹಾಗೂ ಸುಸ್ಥಿರತೆಗಳೆಂಬ ಏಳು ಆಧಾರ ಸ್ತಂಭದ ಮೇಲೆ ನಿಂತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

ಮುಂದಿನ 5 ವರ್ಷಗಳಲ್ಲಿ ಭಾರತ ಸರ್ಕಾರ ತನ್ನ ಸಾಲವನ್ನು ಜಿಡಿಪಿಯ ಶೇ.66 ಕ್ಕಿಂತಲೂ ಕಡಿಮೆ ಮಾಡುವುದು ಅತ್ಯಗತ್ಯ. ಭಾರತದ ಆರ್ಥಿಕತೆ ಸ್ಥಿರಗೊಳಿಸಲು ಹಾಗೂ ಕೋವಿಡ್‌ಗೂ ಮೊದಲಿದ್ದ ಸ್ಥಿತಿಗೆ ಮರಳಲು ಇಷ್ಟು ಸಮಯ ಸಾಲುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ

2020-21ರಲ್ಲಿ ಶೇ.6.6, 2021-22ರಲ್ಲಿ ಶೇ.8.9, 2022-23ರಲ್ಲಿ ಶೇ.7.2 ಬೆಳವಣಿಗೆ ದಾಖಲಿಸಿದರೂ 2034-35ರ ಹಣಕಾಸು ವರ್ಷದಲ್ಲಿ ಕೋವಿಡ್ 19ನಿಂದ ಆದ ನಷ್ಟವನ್ನು ಭರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.

2022ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 147.54 ಕೋಟಿ ರೂ. ಆಗಬಹುದು ಎಂದು ವರದಿ ಅಂದಾಜಿಸಿದೆ.

Leave a Reply

Your email address will not be published.

Back to top button